ಗೋವಾ: ಕಾಂಗ್ರೆಸ್ ಪಕ್ಷ ಸೇರಿದ ಬಿಜೆಪಿಯ ಕಾರ್ಲೊಸ್ ಅಲ್ಮೆದಾ
Team Udayavani, Dec 22, 2021, 6:48 PM IST
ಪಣಜಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ಪಕ್ಷದ ಶಾಸಕ ಕಾರ್ಲೊಸ್ ಅಲ್ಮೆದಾ ರವರು ಬುಧವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ತಮ್ಮ ಬೆಂಬಲಿಗರೊಂದಿಗೆ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾರ್ಲೊಸ್ ಅಲ್ಮೆದಾ ಹೇಳಿದರು.
ಈ ಸಂದರ್ಭದಲ್ಲಿ ಕಾಗ್ರೇಸ್ ನಾಯಕ ದಿಗಂಬರ್ ಕಾಮತ್, ಕಾಂಗ್ರೆಸ್ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್, ಉಪಸ್ಥಿತರಿದ್ದರು.
ಬಿಜೆಪಿ ಶಾಸಕ ಕಾರ್ಲೊಸ್ ಅಲ್ಮೆದಾ ರವರು ಬಿಜೆಪಿ ಶಾಶಕ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.