ಗೋವಾ ಚುನಾವಣೆ : 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶಿವಸೇನೆ ನಿರ್ಧಾರ
Team Udayavani, Sep 15, 2021, 11:48 AM IST
ಪಣಜಿ: ಶಿವಸೇನೆಯು ಗೋವಾ ವಿಧಾನಸಭಾ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ.
ಶಿವಸೇನೆಯ ಗೋವಾ ರಾಜ್ಯ ಪ್ರಮುಖರಾದ ಜಿತೇಶ್ ಕಾಮತ್, ಮಿಲಿಂದ ಗಾವಸ್ ರವರು ಮುಂಬಯಿಯ ಖಾಸಗಿ ಹೋಟೆಲ್‍ನಲ್ಲಿ ಶಿವಸೇನೆಯ ರಾಷ್ಟ್ರೀಯ ನಾಯಕ ಸಂಜಯ ರಾವುತ್ ರವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದರು.
ಶಿವಸೇನೆ ಪಕ್ಷ ಪ್ರಮುಖ ಉದ್ಧವ ಠಾಕ್ರೆಯವರೊಂದಿಗೆ ಈ ಕುರಿತಂತೆ ಸಂಜಯ್ ರಾವುತ್ ರವರು ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಶಿವಸೇನೆ ತನ್ನ ಬಲ ಹೆಚ್ಚಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದೆ.
ಇದನ್ನೂ ಓದಿ :ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಅಲ್ಪಸಂಖ್ಯಾಕರು ಸುರಕ್ಷಿತರಾಗಿದ್ದಾರೆ: ಇಕ್ಬಾಲ್ ಸಿಂಗ್
ಶಿವಸೇನೆಯು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೂ ಕೂಡ 16 ಕ್ಷೇತ್ರಗಳಲ್ಲಿ ಮಾತ್ರ ನಮ್ಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗುವುದು ಇದರಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದು ಜಿತೇಶ್ ಕಾಮತ್ ಪ್ರತಿಕ್ರಿಯೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂಗ್ಲಿಷ್ ಕೌಶಲ್ಯಾಭಿವೃದ್ಧಿಗೆ ಕೈಜೋಡಿಸಿದ ಕೇಂಬ್ರಿಜ್ ವಿವಿ-ಎನ್ಎಸ್ಡಿಸಿ
ತೆಲಂಗಾಣ: “ದಲಿತ ಬಂಧು’ವಿಗೆ 17, 700 ಕೋಟಿ: ಸಚಿವ ಟಿ.ಹರೀಶ್ ರಾವ್
ಉಮ್ಮನ್ ಚಾಂಡಿಯವರನ್ನು ಕುಟುಂಬ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೇ?
ಶಿಕ್ಷಣ ಸಂಸ್ಥೆಗಳಲ್ಲಿ ಮುಟ್ಟಿನ ರಜೆ ನೀಡಲು ಕಾನೂನು ಜಾರಿ ಇಲ್ಲ: ಕೇಂದ್ರ
ಕೇಂದ್ರಕ್ಕೆ ಹೆದರಿಕೆ:ಅದಾನಿ ಗ್ರೂಪ್ ಬಗ್ಗೆ ಚರ್ಚೆಗೆ ರಾಹುಲ್ ಗಾಂಧಿ ಆಗ್ರಹ