ಗೋಡ್ಸೆ ದೇಶಭಕ್ತ: ಸಾಧ್ವಿ ಹೇಳಿಕೆಯಿಂದ ದೂರ ಸರಿದ ಬಿಜೆಪಿ, ಕ್ಷಮೆಯಾಚಿಸಲು ಸಲಹೆ

Team Udayavani, May 16, 2019, 7:24 PM IST

ಲಕ್ನೋ : ಮಹಾತ್ಮ ಗಾಂಧಿ ಅವರ ಹಂತಕ ನಾಥೂರಾಮ್‌ ಗೋಡ್ಸೆ ದೇಶಭಕ್ತನಾಗಿದ್ದ ಎಂದು ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ನೀಡಿದ್ದ ಹೇಳಿಕೆಯಿಂದ ದೂರ ಸರಿದಿರುವ ಭಾರತೀಯ ಜನತಾ ಪಕ್ಷ, ಇದು ಆಕ್ಷೇಪಾರ್ಹ ಹೇಳಿಕೆಯಾಗಿದೆ ಎಂದು ಹೇಳಿದೆ.

ಸಾಧ್ವಿ ಅವರ ಈ ಹೇಳಿಕೆಯನ್ನು ಖಂಡಿಸಿರುವ ಉತ್ತರ ಪ್ರದೇಶದ ಮಾಧ್ಯಮ ಪ್ರಭಾರಿ ಲೋಕೇಂದ್ರ ಪರಾಶರ್‌ ಅವರು “ಬಿಜೆಪಿಯು ಸಾಧ್ವಿ ಹೇಳಿಕೆಯನ್ನು ಒಪ್ಪುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಗೋಡ್ಸೆ ಕುರಿತ ಹೇಳಿಕೆಗಾಗಿ ಆಕೆಯನ್ನು ಕರೆಸಿಕೊಂಡು ಸ್ಪಷ್ಟೀಕರಣ ಕೇಳಲಾಗುವುದು ಮಾತ್ರವಲ್ಲ ಅದಕ್ಕಾಗಿ ಕ್ಷಮೆ ಕೋರುವಂತೆಯೂ ಕೇಳಲಾಗುವುದು ಎಂದು ಪರಾಶರ್‌ ಹೇಳಿದರು.

ಮಹಾತ್ಮ ಗಾಂಧಿ ಅವರನ್ನು ಗೋಡ್ಸೆ ಕೊಂದದ್ದೆಂದು ಇಡಿಯ ಜಗತ್ತಿಗೇ ತಿಳಿದಿದೆ. ಆದುದರಿಂದ ಸಾಧ್ವಿ ತಮ್ಮ ಈ ಹೇಳಿಕೆಗಾಗಿ ಕ್ಷಮೆಯಾಚಿಸಬೇಕು’ ಎಂದು ಪರಾಶರ್‌ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ