ಗುಜರಿ ನೀತಿಯಡಿ ತೆರಿಗೆ ಕಮ್ಮಿ

ನೋಯ್ಡಾದಲ್ಲಿ ಹಳೆಯ ಕಾರು ವಿಲೇ ಘಟಕ ಉದ್ಘಾಟಿಸಿ ಸಚಿವ ಗಡ್ಕರಿ ಪ್ರಸ್ತಾವ

Team Udayavani, Nov 24, 2021, 6:50 AM IST

ಗುಜರಿ ನೀತಿಯಡಿ ತೆರಿಗೆ ಕಮ್ಮಿ

ಹೊಸದಿಲ್ಲಿ/ನೋಯ್ಡಾ: ವಿದ್ಯುತ್‌ ವಾಹನಗಳ ಉತ್ತೇ ಜನಕ್ಕಾಗಿ ಪೆಟ್ರೋಲ್‌, ಡೀಸೆಲ್‌ ವಾಹನಗಳ ಮೇಲೆ ನಿಷೇಧವಿಲ್ಲ. ಇದರ ಜತೆಗೆ ಹಳೆಯ ವಾಹನಗಳನ್ನು ಗುಜರಿ ನೀತಿಯಡಿ ನೀಡಿ ಹೊಸ ವಾಹನಗಳನ್ನು ಖರೀದಿಸುವ ಪ್ರಸ್ತಾಪಕ್ಕೆ ಮತ್ತಷ್ಟು ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವಗಳಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ನೋಯ್ಡಾದಲ್ಲಿ ಮಾರುತಿ ಸುಜುಕಿ ಮತ್ತು ಟೊಯೋಟಾ ತುಷೋ ಜಂಟಿ ಸಹಭಾಗಿತ್ವದಲ್ಲಿ ಹಳೆಯ ಕಾರು ವಿಲೇವಾರಿ ಕೇಂದ್ರ ಉದ್ಘಾಟನೆಯ ಸಂದರ್ಭದಲ್ಲಿ ಗಡ್ಕರಿ ಮಾತ ನಾಡಿದರು. ಎರಡೂ ಸಂಸ್ಥೆಗಳು ಜತೆಯಾಗಿ ಸಿದ್ಧಗೊಳಿಸಿದ ಮತ್ತು ಕೇಂದ್ರ ಸರಕಾರದಿಂದ ಅನುಮೋದನೆ ಪಡೆದ ಮೊದಲ ವಾಹನ ಗುಜರಿ ಕೇಂದ್ರ ಇದಾಗಿದೆ.

ಶೇ.25ರಷ್ಟು ತೆರಿಗೆ ವಿನಾಯಿತಿ: ಇತ್ತೀಚೆಗೆ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಹೊಸ ಗುಜರಿ ನೀತಿಯ ಪ್ರಕಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಳೆ ವಾಹನಗಳ ಮಾರಾಟ ಮಾಡಿ ಹೊಸ ವಾಹನ ಖರೀದಿ­ಸಿದರೆ, ಶೇ.25ರ ವರೆಗೆ ತೆರಿಗೆ ವಿನಾಯಿತಿ ನೀಡಬೇಕು.

ನಿಷೇಧವಿಲ್ಲ: ವಿದ್ಯುತ್‌ ವಾಹನಗಳ ಮಾರಾಟ, ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಪೆಟ್ರೋಲ್‌, ಡೀಸೆಲ್‌ ಚಾಲಿತ ವಾಹನಗಳ ಮೇಲೆ ನಿಷೇಧ ಹೇರುವ ಪ್ರಸ್ತಾವ ಇಲ್ಲ. ಜನರು ಶೇ.50ರಷ್ಟು ಪ್ರಮಾಣದಲ್ಲಿಯಾದರೂ ಇಥೆನಾಲ್‌ ಮಿಶ್ರಿತ ಪೆಟ್ರೋಲ್‌ ಬಳಸಬೇಕು. ವಿದ್ಯುತ್‌ ಚಾಲಿತ ವಾಹನಗಳ ಮಾರಾಟ ಸಹಜವಾ­ಗಿಯೇ ಹೆಚ್ಚುತ್ತಿದೆ. ಬದಲಿ ಇಂಧನ ಗಳಾಗಿ­ರುವ ಬಯೋ ಎಲ್‌ಎನ್‌ಜಿ, ಗ್ರೀನ್‌ ಹೈಡ್ರೋಜನ್‌ ಸಹಿತ ಹಲವು ಆಯ್ಕೆಗಳನ್ನು ಪರಿಶೀಲಿಸುತ್ತಿ­ದ್ದೇವೆ. ಇ-ಚಾಲಿತ ವಾಹನಗಳ ಅಭಿವೃದ್ಧಿ ನಿಟ್ಟಿನಲ್ಲಿ 250 ಸ್ಟಾರ್ಟ್‌ ಅಪ್‌ಗ್ಳು ಕೆಲಸ ಮಾಡುತ್ತಿವೆ ಎಂದರು ಗಡ್ಕರಿ.

ಮಾರುತಿ ಸುಜುಕಿ ಇಂಡಿಯಾ ಮತ್ತು ಟೊಯೋಟಾ ಸಂಸ್ಥೆಯ ಅಧಿಕೃತ ಕಾರು ಗುಜರಿ ಕೇಂದ್ರ ವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಂಗಳವಾರ ನೋಯ್ಡಾದಲ್ಲಿ ಉದ್ಘಾಟಿಸಿದರು.

ಇದನ್ನೂ ಓದಿ:“ಆಯುಷ್ಮಾನ್‌’ಗೆ ಖಾಸಗಿ ಆಸ್ಪತ್ರೆಗಳನ್ನು ಆಕರ್ಷಿಸಲು ಕ್ರಮ

ಹೊಸ ಕೇಂದ್ರದ ವಿಶೇಷ?
ಮಾರುತಿ ಸುಜುಕಿ ಇಂಡಿಯಾ ಮತ್ತು ಟೊಯೋಟಾ ತುಷೋ ನೋಯ್ಡಾದಲ್ಲಿ ಈ ಘಟಕವನ್ನು ಸ್ಥಾಪಿಸಿದೆ. ರಾಷ್ಟ್ರೀಯ ವಾಹನ ಗುಜರಿ ನೀತಿ ಪ್ರಕಟಿಸಿದ್ದ ಸಂದರ್ಭದಲ್ಲಿ ಕೇಂದ್ರ ಸರಕಾರ ಬೆಂಗಳೂರು ಸೇರಿ ದೇಶದ 26 ನಗರಗಳಲ್ಲಿ ಸ್ಕ್ರಾಪಿಂಗ್‌ ಘಟಕ ಆರಂಭಿಸಲು ಅನುಮತಿ ನೀಡಲಾಗಿತ್ತು.

ನಿಮಗೇನು ಲಾಭ?
ಸ್ಕ್ರಾಪ್‌ ಮಾಡಿಸಿದ ಬಳಿಕ ನಿಮಗೆ ಸಂಸ್ಥೆ ಒಂದಿಷ್ಟು ಹಣವನ್ನು ನೀಡಲಿದೆ. ಹಾಗೆಯೇ ಅದರ ಜತೆಯಲ್ಲಿ ಗಾಡಿಯ “ವಿನಾಶ ಪ್ರಮಾಣ ಪತ್ರ’ ನೀಡಲಾಗುವುದು.

ಸ್ವಯಂ ಪ್ರೇರಿತವಾಗಿ ಹಳೆ ವಾಹನಗಳನ್ನು ಸ್ಕ್ರಾಪ್‌ ಮಾಡಿಸುವವರಿಗೆ ಸರಕಾರ ವಿವಿಧ ಸೌಲಭ್ಯ ನೀಡಲಿದೆ. ಹೊಸ ವಾಹನ ಖರೀದಿಸುವಾಗ ರಸ್ತೆ ತೆರಿಗೆಯಲ್ಲಿ ಶೇ. 25 ರಿಯಾಯಿತಿ, ಉಚಿತ ನೋಂದಣಿ ನೀಡಲಾಗುವುದು. ಹಾಗೆಯೇ ಹಳೆ ವಾಹನ ಸ್ಕ್ರಾಪ್‌ ಮಾಡಿ ಹೊಸ ವಾಹನ ಖರೀದಿಸುವವರಿಗೆ ಶೇ. 5 ರಿಯಾಯಿತಿ ನೀಡಲು ವಾಹನ ಉತ್ಪಾದಕ ಸಂಸ್ಥೆಗಳಿಗೂ ಸೂಚನೆ ನೀಡಲಾಗಿದೆ.

ಸ್ಕ್ರಾಪಿಂಗ್‌ ಹೇಗೆ?
-ಮೊದಲು ವಾಹನದ ಕೀಲೆಣ್ಣೆ, ಇಂಧನ, ಕೂಲರ್‌ಗಳನ್ನು ತೆಗೆಯಲಾಗುವುದು.
– ಎರಡನೇ ಹಂತದಲ್ಲಿ ಕಾರಿನ ಬಾಗಿಲು, ಬಾನೆಟ್‌, ಸೀಟು, ಡ್ಯಾಶ್‌ಬೋರ್ಡ್‌ಗಳನ್ನು ತೆಗೆದು ಹಾಕಲಾಗುವುದು.
-ಮುಖ್ಯ ಮೆಕಾನಿಕಲ್‌ ಭಾಗಗಳಾದ ಎಂಜಿನ್‌, ಸಸ್ಪೆನ್ಶನ್‌ ತೆಗೆದು, ಚಾಸಿಸ್‌ ನಂಬರ್‌ ತೆಗೆಯಲಾಗುತ್ತದೆ.
-ಕೊನೆಯದಾಗಿ ಉಳಿಯುವ ಬಾಡಿಯನ್ನು ಕುಗ್ಗಿಸಿ, ಕಬ್ಬಿಣ ಕರಗಿಸುವವರಿಗೆ ಮಾರಾಟ ಮಾಡಲಾಗುವುದು.

ಟಾಪ್ ನ್ಯೂಸ್

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.