ಅಸ್ಸಾಂ: ಶಾಲೆಗೆ ಗೋಮಾಂಸ ತಂದ ಮುಖ್ಯೋಪಾಧ್ಯಾಯಿನಿಯ ಬಂಧನ
Team Udayavani, May 19, 2022, 6:11 PM IST
ಸಾಂದರ್ಭಿಕ ಚಿತ್ರ
ಗೋಲ್‌ಪಾರಾ: ಅಸ್ಸಾಂನ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯನ್ನು ಶಾಲೆಗೆ ಮಧ್ಯಾಹ್ನದ ಊಟಕ್ಕೆ ಬೇಯಿಸಿದ ಗೋಮಾಂಸ ತಂದಿದ್ದಕ್ಕಾಗಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮೇ 11 ರಿಂದ ಮೇ 14 ರ ನಡುವೆ ರಾಜ್ಯದ ಶಾಲೆಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ‘ಗುಣೋತ್ಸವ 2022’ ಸಮಯದಲ್ಲಿ ಮುಖ್ಯೋಪಾಧ್ಯಾಯಿನಿಯು ಬೇಯಿಸಿದ ಗೋಮಾಂಸವನ್ನು ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಅವರನ್ನು ಮೇ 16 ರಂದು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಲಖಿಪುರ ಪ್ರದೇಶದ ಹುರ್ಕಾಚುಂಗಿ ಮಿಡಲ್ ಇಂಗ್ಲಿಷ್ ಶಾಲೆಯ ಆಡಳಿತ ಸಮಿತಿಯ ಅಧ್ಯಕ್ಷರು ಮಧ್ಯಾಹ್ನದ ಊಟಕ್ಕೆ ಗೋಮಾಂಸವನ್ನು ಕೊಂಡೊಯ್ದಿದ್ದಾರೆ ಎಂದು ಆರೋಪಿಸಿ ಮುಖ್ಯೋಪಾಧ್ಯಾಯಿನಿ ವಿರುದ್ಧ ದೂರು ದಾಖಲಿಸಿದ್ದಾರೆ.
“ನಾವು ಅವರನ್ನು ಮೇ 16 ರಂದು ಪೊಲೀಸ್ ಠಾಣೆಗೆ ಕರೆತಂದಿದ್ದೇವೆ. ವಿಚಾರಣೆಯ ನಂತರ ಅವರನ್ನು ಬಂಧಿಸಲಾಯಿತು ಮತ್ತು ನ್ಯಾಯಾಲಯವು ಮರುದಿನ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೃಣಾಲ್ ದೇಕಾ ಅವರು ತಿಳಿಸಿದ್ದಾರೆ.
ಮುಖ್ಯೋಪಾಧ್ಯಾಯಿನಿ ವಿರುದ್ಧ ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದ ಪ್ರಕರಣವನ್ನು ದಾಖಲಿಸಲಾಗಿದೆ.
ಅಸ್ಸಾಂನಲ್ಲಿ ಗೋಮಾಂಸ ಸೇವನೆಯು ಕಾನೂನುಬಾಹಿರವಲ್ಲ, ಆದರೆ ಅಸ್ಸಾಂ ಗೋಸಂರಕ್ಷಣಾ ಕಾಯಿದೆ, 2021 ಹಿಂದೂಗಳು, ಜೈನರು ಮತ್ತು ಸಿಖ್ಖರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ, ದೇವಸ್ಥಾನದ ಐದು ಕಿಮೀ ವ್ಯಾಪ್ತಿಯೊಳಗೆ ಗೋಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ನಿಷೇಧಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉದಯಪುರ ಮತ್ತೆ ಉದ್ವಿಗ್ನ: ಶಿರಚ್ಛೇದನ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆ, ಕಲ್ಲುತೂರಾಟ
ಸರ್ಕಾರ ರಚನೆಗೆ ಸಿದ್ಧತೆ: ಫಡ್ನವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿ, ಶಿಂಧೆ ಉಪಮುಖ್ಯಮಂತ್ರಿ?
ಕೋವಿಡ್ ಸಂಖ್ಯೆ ಹೆಚ್ಚಳ:24ಗಂಟೆಯಲ್ಲಿ 18,000 ಪ್ರಕರಣ ದೃಢ, ಲಕ್ಷದ ಗಡಿ ದಾಟಿದ ಸಕ್ರಿಯ ಕೇಸ್
ಟೈಲರ್ ಕನ್ಹಯ್ಯಾ ಹತ್ಯೆ ಆರೋಪಿಗೆ ಕರಾಚಿಯ ಉಗ್ರ ಸಂಘಟನೆ ತರಬೇತಿ; ಪಾಕ್ ಹೇಳಿದ್ದೇನು?
ತಮ್ಮನಿಗಾಗಿ 434 ಮೀ. ಉದ್ದ, 5 ಕೆ.ಜಿ. ತೂಕದ ಕ್ಷಮಾಪಣೆ ಪತ್ರ ಬರೆದ ಸಹೋದರಿ !
MUST WATCH
ಹೊಸ ಸೇರ್ಪಡೆ
ಧಾರಾಕಾರ ಮಳೆ; ಬಂಟ್ವಾಳದಲ್ಲಿ ಅಪಾಯದ ಮಟ್ಟ ತಲುಪದ ನೇತ್ರಾವತಿ
ವಿಟ್ಲ: ಮಳೆ ಅಬ್ಬರ- ಹಲವು ಮನೆಗಳು ಜಲಾವೃತ-ಜನ ಜೀವನ ಅಸ್ತವ್ಯಸ್ತ
ಹರ್ಷ ಹತ್ಯೆ ಪ್ರಕರಣ: ಶಿವಮೊಗ್ಗದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಎನ್ ಐಎ ತಂಡ
ಕುಣಿಗಲ್: ಕೆಂಪೇಗೌಡರಿಗೆ ಅಪಮಾನವಾದ ಸ್ಥಳದಲ್ಲಿ ಪ್ರತಿಮೆ ನಿರ್ಮಾಣ: ಕೆಂಪೇಗೌಡ ಸೇನೆ ತಿರ್ಮಾನ
ಉದಯಪುರ ಮತ್ತೆ ಉದ್ವಿಗ್ನ: ಶಿರಚ್ಛೇದನ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆ, ಕಲ್ಲುತೂರಾಟ