ಲಿಂಗ ತಾರತಮ್ಯ ನಿವಾರಣೆಗೆ ಶಾಲೆಗಳಲ್ಲಿ ಹೋಮ್‌ಸೈನ್ಸ್‌ ಕಲಿಕೆ

Team Udayavani, Jul 24, 2017, 8:35 AM IST

ನವದೆಹಲಿ: ಅಪ್ಪನಿಗೆ ಎಂಟು ಗಂಟೆಗಳ ಕೆಲಸವಾದರೆ, ಅಮ್ಮನಿಗೆ 24 ಗಂಟೆಗಳ ಕೆಲಸ. ಆದರೆ ಅಪ್ಪನ ಕೆಲಸಕ್ಕೆ ಹಣ ಕೊಟ್ಟರೆ, ಅಮ್ಮನ ಕೆಲಸಕ್ಕೆ ಹಣವೂ ಇಲ್ಲ, ಆ ಕಾರ್ಯಕ್ಕೆ ಮೆಚ್ಚುಗೆಯೂ ಇಲ್ಲ!

ಇದು ಸದ್ಯ ಭಾರತವಷ್ಟೇ ಅಲ್ಲ, ಇಡೀ ಜಗತ್ತಿನಲ್ಲೇ ಕಾಣುವ ಲಿಂಗ ತಾರತಮ್ಯ ನೀತಿ. ಇದನ್ನು ಹೋಗಲಾಡಿಸುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಶಾಲೆಗಳಲ್ಲಿ ಕಡ್ಡಾಯವಾಗಿ ಗೃಹ ವಿಜ್ಞಾನ ಅಥವಾ ಹೋಮ್‌ಸೈನ್ಸ್‌ ಕಲಿಕೆಗೆ ಶಿಫಾರಸು ಮಾಡಿದೆ. ರಾಷ್ಟ್ರೀಯ ಮಹಿಳಾ ನೀತಿ, 2017 ಕರಡನ್ನು ಸಿದ್ಧಪಡಿಸಲಾಗಿದ್ದು, ಇದಕ್ಕೆ ಈಗಾಗಲೇ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಯನ್ನೂ ನೀಡಿದೆ. 

ಮಕ್ಕಳಿಗೆ ಚಿಕ್ಕಂದಿನಿಂದಲೇ ಮನೆಯೊಳಗಿನ ಕೆಲಸದ ಬಗ್ಗೆ ಅರಿವು ಮೂಡಿಸಿ, ಲಿಂಗ ತಾರತಮ್ಯ ಹೋಗಲಾಡಿಸುವುದು ಹೋಮ್‌ ಸೈನ್ಸ್‌ ಅಳವಡಿಕೆಯ ಉದ್ದೇಶ. ಇದನ್ನು ಶಾಲೆಗಳಲ್ಲಿನ ಬಾಲಕರು ಮತ್ತು ಬಾಲಕಿಯರು ಕಡ್ಡಾಯವಾಗಿ ಕಲಿಯಲೇಬೇಕು ಎಂದು ಶಿಫಾರಸು ಮಾಡಲಾಗಿದೆ. ಇದಕ್ಕಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಶಾಲಾ ಪಠ್ಯಕ್ರಮವನ್ನು ಪುನರ್‌ ರಚಿಸಲಿ ಎಂದಿದೆ. ಇದರ ಜತೆಯಲ್ಲೇ ದೈಹಿಕ ಶಿಕ್ಷಣವೂ ಕಡ್ಡಾಯವಾಗಿ ಇರಬೇಕು ಎಂದು ಹೇಳಿದೆ.

ಈ ಮಧ್ಯೆ, ದುಡಿಯುವ ಹೆಣ್ಣು ಮಕ್ಕಳಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಸಮಾನ ವೇತನ, ತೆರಿಗೆಯಲ್ಲಿ ವಿನಾಯಿತಿ ಕೊಡಬೇಕು. ಅಲ್ಲದೆ, ಕೇವಲ ಮಹಿಳೆಯರಷ್ಟೇ ಕೆಲಸ ಮಾಡುವ ಸಂಸ್ಥೆಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ, ಕಾರ್ಪೊರೇಟ್‌ ಸಂಸ್ಥೆಗಳು, ವಾಣಿಜ್ಯ ವಲಯಗಳು ಮತ್ತು ವಸತಿ ಸಂಕೀರ್ಣಗಳಲ್ಲಿ ಕಡ್ಡಾಯವಾಗಿ ಮಗುವಿನ ಪಾಲನೆ ಮತ್ತು ಪೋಷಣೆ ಕೇಂದ್ರ(ಡೇ ಕೇರ್‌)ಗಳನ್ನು ಸ್ಥಾಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ. 
ಶಾಲಾ ವಾಹನಗಳಿಗೆ ಮಹಿಳೆಯರನ್ನೇ  ಚಾಲಕಿಗಳನ್ನಾಗಿ ಮಾಡಿದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಪ್ಪಿಸಬಹುದು ಎಂದು ಹೇಳುತ್ತಿದೆ ಈ ಕರಡು ಪ್ರಸ್ತಾಪ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಒಪ್ಪಿದರೆ ದಶಕಗಳಷ್ಟು ಹಳೆಯದಾದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕದ ಅಧ್ಯಕ್ಷ...

  • ಶತಕೋಟಿ ಕನಸುಗಳನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋಗುವ ಇಸ್ರೋದ ಕನಸು ನನಸಾಗಿದೆ.ಸರಿಯಾಗಿ 11 ವರ್ಷಗಳ ಹಿಂದೆ ಚಂದ್ರಯಾನ-1ರಲ್ಲಿ ಕಂಡಿದ್ದ ಯಶಸ್ಸನ್ನು ಇಸ್ರೋ...

  • ಇಡೀ ವಿಶ್ವದಲ್ಲಿ ಯಾರೂ ಅನ್ವೇಷಣೆ ಮಾಡದ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸಲು ಮುಂದಾಗಿರುವ ಇಸ್ರೋ ಮೊದಲ ಹೆಜ್ಜೆ ಯಶಸ್ವಿಯಾಗಿ ಇರಿಸಿದೆ. ಶ್ರೀಹರಿಕೋಟಾದಿಂದ...

  • ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಜಿಲ್ಲೆಯ 132 ಗ್ರಾಮಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಹೆಣ್ಣು ಮಕ್ಕಳೇ ಹುಟ್ಟಿಲ್ಲ. ಜನಿಸಿರುವ ಶಿಶುಗಳೆಲ್ಲವೂ ಗಂಡು....

  • ಪುದುಚೆರಿ: ಚುನಾವಣಾ ಆಯುಕ್ತರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪುದುಚೆರಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್‌ ಕಿರಣ್‌ ಬೇಡಿ ನಡುವೆ ಹೊಸ ವಿವಾದ ಶುರುವಾಗಿದೆ....

ಹೊಸ ಸೇರ್ಪಡೆ