ದೇಶಕ್ಕೆ ಐಐಟಿ ಬಾಂಬೆ ಬೆಸ್ಟ್
Team Udayavani, Jun 11, 2020, 8:14 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕ್ಯೂಎಸ್ ವಿಶ್ವವಿದ್ಯಾಲಯಗಳ ವಿಶ್ವ ರ್ಯಾಂಕಿಂಗ್ ಪಟ್ಟಿ-2021 ಪ್ರಕಟವಾಗಿದ್ದು, ಐಐಟಿ- ಮುಂಬಯಿ, ಸತತ ನಾಲ್ಕನೇ ಬಾರಿಗೆ ಭಾರತದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಆದರೆ, ಈ ಬಾರಿ ಅದು ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 172ನೇ ಸ್ಥಾನಕ್ಕೆ ಕುಸಿದಿದೆ. 2020ರಲ್ಲಿ ಅದು 152ನೇ ಸ್ಥಾನದಲ್ಲಿತ್ತು. ನಂತರದ ಸ್ಥಾನದಲ್ಲಿ ಐಐಎಸ್ಸಿ-ಬೆಂಗಳೂರು (185) ಇದೆ. ಕಳೆದ ಬಾರಿ ಅದು 184ನೇ ಸ್ಥಾನದಲ್ಲಿತ್ತು. ಐಐಟಿ- ದಿಲ್ಲಿ 193ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ ಅದು 182ನೇ ಸ್ಥಾನದಲ್ಲಿತ್ತು.
ಮೊದಲ 1000 ರ್ಯಾಂಕಿಂಗ್ನಲ್ಲಿ ಕೇವಲ 21 ಭಾರತೀಯ ಶೈಕ್ಷಣಿಕ ಸಂಸ್ಥೆಗಳು ಈ ಬಾರಿ ಸ್ಥಾನ ಪಡೆದುಕೊಂಡಿವೆ. ಕಳೆದ ವರ್ಷ 25 ಸಂಸ್ಥೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ಅಲ್ಲದೆ, ಶ್ರೇಣಿವಾರು, ಈ ಬಾರಿ ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಕಾರ್ಯಕ್ಷಮತೆ ಕಡಿಮೆಯಾಗಿದೆ. ಉಳಿದಂತೆ, ಐಐಟಿ-ಮದ್ರಾಸ್ (275), ಐಐಟಿ - ಖರಗ್ಪುರ (314), ಐಐಟಿ-ಕಾನ್ಪುರ (350), ಐಐಟಿ-ರೂರ್ಕಿ (383), ಐಐಟಿ-ಗುವಾಹಟಿ (470) ಮೊದಲ 500 ರ್ಯಾಂಕಿಂಗ್ನಲ್ಲಿ ಸ್ಥಾನ ಪಡೆ ದಿವೆ. ಈ ಬಾರಿಯೂ ಕ್ಯೂಎಸ್ ವಿಶ್ವವಿದ್ಯಾಲ ಯಗಳ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಅಮೆರಿಕದ ವಿಶ್ವವಿದ್ಯಾಲಯಗಳು ಅಗ್ರಸ್ಥಾನ ಪಡೆದು ಕೊಂಡಿವೆ. ಎಂಐಟಿ (ಮೆಸ್ಯಾಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸತತ 9ನೇ ವರ್ಷವೂ ಮೊದಲ ಸ್ಥಾನ ಗಳಿಸಿ, ಇತಿಹಾಸ ನಿರ್ಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ