ಆಧಾರ್, ಪ್ಯಾನ್ ಹೆಸರು ತಿದ್ದುಪಡಿಗೆ ‘ಐಟಿ’ ಅವಕಾಶ
Team Udayavani, May 15, 2017, 11:23 AM IST
ಹೊಸದಿಲ್ಲಿ: ಪ್ಯಾನ್ನೊಂದಿಗೆ ಆಧಾರ್ ನಂಬರ್ ಅನ್ನು ಜೋಡಿಸುವುದನ್ನು ತೆರಿಗೆ ಇಲಾಖೆ ಮತ್ತಷ್ಟು ಸರಳಗೊಳಿಸಿದೆ. ಆದರೂ ಹೆಸರು ಇತ್ಯಾದಿಗಳಲ್ಲಿನ ಸ್ಪೆಲ್ಲಿಂಗ್ ಇತ್ಯಾದಿಗಳ ದೋಷಗಳಿಂದ ಜೋಡಣೆಯಾಗುತ್ತಿಲ್ಲ. ಇದಕ್ಕಾಗಿ ತೆರಿಗೆ ಇಲಾಖೆ ತನ್ನ ವೆಬ್ಸೈಟ್ನಲ್ಲಿ ಪ್ಯಾನ್, ಆಧಾರ್ನಲ್ಲಿ ಹೆಸರು ಸರಿಪಡಿಸಲು ಅನುಕೂಲ ವಾಗುವಂತೆ ಲಿಂಕ್ ಸೌಲಭ್ಯ ಕಲ್ಪಿಸಲಿದೆ. ಲಿಂಕ್ ತೆರೆದು ಹೆಸರು ಸರಿಪಡಿಸಿಕೊಳ್ಳಬಹುದು. ಒಂದು ವೇಳೆ ಪ್ಯಾನ್ನೊಂದಿಗೆ ಆಧಾರ್ ತಾಳೆಯಾಗದಿದ್ದರೆ, ಸರಿಯಾದ್ದನ್ನು ಆಧಾರ್ ಅಥವಾ ಪ್ಯಾನ್ನಲ್ಲಿ ಮಾಡಿಕೊಳ್ಳಲು ಇದು ನೆರವಾಗಲಿದೆ.