ಭಾರತೀಯರ ಆಯುಸ್ಸು ಹೆಚ್ಚಳ; 10 ವರ್ಷಗಳಷ್ಟು ವೃದ್ಧಿಯಾದ ಆಯುಸ್ಸು

ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಸಂತಸದ ಸುದ್ದಿ

Team Udayavani, Oct 17, 2020, 6:05 AM IST

ಭಾರತೀಯರ ಆಯುಸ್ಸು ಹೆಚ್ಚಳ; 10 ವರ್ಷಗಳಷ್ಟು ವೃದ್ಧಿಯಾದ ಆಯುಸ್ಸು

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್ ಸಂಕಟದ ನಡುವೆಯೂ ಭಾರತೀಯರ ಜೀವಿತಾವಧಿ ಕುರಿತಂತೆ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. 1990ರಿಂದ 2019ರ ವರೆಗೆ ಭಾರತೀಯರ ಆಯುಸ್ಸು 10 ವರ್ಷಗಳಷ್ಟು ಹೆಚ್ಚಾಗಿದೆ.

1990ರಲ್ಲಿ ಭಾರತೀಯರ ಆಯುಸ್ಸು 59.6 ವರ್ಷಗಳಿತ್ತು. ಆದರೆ ಈಗ 70.8 ವರ್ಷಗಳಿಗೆ ಏರಿಕೆಯಾಗಿದೆ. ಇದರಲ್ಲಿ ಕೇರಳದವರ ಜೀವಿತಾವಧಿಯೇ ಹೆಚ್ಚಳ. ಇಲ್ಲಿನ ಜನರು 77.3 ವರ್ಷಗಳ ಕಾಲ ಬದುಕಿದರೆ, ಉತ್ತರ ಪ್ರದೇಶದ ಮಂದಿ 66.9 ವರ್ಷಗಳ ಕಾಲ ಬದುಕುತ್ತಾರೆ.

ಅಂತಾರಾಷ್ಟ್ರೀಯ ಜರ್ನಲ್‌ ಲ್ಯಾನ್ಸೆಟ್‌ ಈ ಕುರಿತಂತೆ ಅಧ್ಯಯನ ನಡೆಸಿದೆ. ಜಗತ್ತಿನ 200 ದೇಶಗಳು ಮತ್ತು ಪ್ರದೇಶಗಳ ಸಮೀಕ್ಷೆ ನಡೆಸಿ ಈ ಅಧ್ಯಯನ ವರದಿ ಬಿಡುಗಡೆ ಮಾಡಲಾಗಿದೆ.

ರೋಗಗಳನ್ನು ಗೆದ್ದಿಲ್ಲ
ಭಾರತೀಯರ ಆಯುಸ್ಸು ಹೆಚ್ಚಾಗಿದೆ ಎಂದರೆ ನಾವು ರೋಗಗಳನ್ನು ಗೆದ್ದಿದ್ದೇವೆ ಎಂದರ್ಥವಲ್ಲ. ಭಾರತೀಯರು ರೋಗಗಳ ಜತೆಗೇ ವಾಸಿಸುವುದನ್ನು ಕಲಿತಿದ್ದಾರೆ ಎಂಬ ಅಂಶವನ್ನೂ ಈ ಅಧ್ಯಯನ ವರದಿ ತಿಳಿಸಿದೆ.

ಸಾವಿಗೆ 286 ರೋಗಗಳು ಕಾರಣ
ಲ್ಯಾನ್ಸೆಟ್‌ನ ಅಧ್ಯಯನದ ಪ್ರಕಾರ ಇಡೀ ಜಗತ್ತಿನ ಮಂದಿ 286 ರೋಗಗಳಿಂದ ಸಾಯುತ್ತಾರೆ. ಜತೆಗೆ 369 ರೋಗಗಳು ಮತ್ತು ಗಾಯಗಳು ಜನರಿಗೆ ಕಷ್ಟಕೊಡುತ್ತಿವೆ. ಭಾರತದಲ್ಲಿ ಸಾಂಕ್ರಾಮಿಕ ರೋಗಗಳಿಂದ ಸಾಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಮರಣಾಂತಿಕ ಅಥವಾ ಗಂಭೀರ ರೋಗಗಳಾದ ಕ್ಯಾನ್ಸರ್‌, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ರೋಗಗಳು, ಪಾರ್ಶ್ವವಾಯು ಸಹಿತ ಇತರ ಕಾಯಿಲೆಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.

ನಿಯಂತ್ರಿಸಬಲ್ಲ ರೋಗ
1990ರಿಂದ 2019ರ ವರೆಗಿನ ಅವಧಿಯಲ್ಲಿ ಭಾರತ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಗಣನೀಯ ಪಾತ್ರ ವಹಿಸಿದೆ. ಆದರೂ ದೇಶದ ಆರೋಗ್ಯ ವಲಯ ಇನ್ನೂ ಚೇತರಿಸಿಕೊಳ್ಳಬೇಕು ಎಂದು ಈ ವರದಿ ರೂಪಿಸಿರುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಭಾರತದಲ್ಲಿ ಹೆರಿಗೆ ವೇಳೆಯ ಮರಣ ಪ್ರಮಾಣ ಹೆಚ್ಚಾಗಿಯೇ ಇತ್ತು. ಆದರೆ ಈಗ ಇದು ತೀರಾ ಕಡಿಮೆಯಾಗಿದೆ. ಆದರೆ ಹೃದಯ ಸಂಬಂಧಿ ರೋಗಗಳ ಬಾಧಿಸುವಿಕೆ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಜತೆಗೆ ಭಾರತದ ಮಟ್ಟಿಗೆ ಪಟ್ಟಿ ಮಾಡಿರುವ ಐದು ಪ್ರಮುಖ ಅಪಾಯಗಳನ್ನೂ ನಿಯಂತ್ರಿಸಬಹುದಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.