ಸೌದಿಯಿಂದ ಭಾರತಕ್ಕೆ 40 ಲಕ್ಷ ಬ್ಯಾರೆಲ್ ಕಚ್ಚಾ ತೈಲ?
Team Udayavani, Oct 11, 2018, 6:00 AM IST
ನವದೆಹಲಿ: ಭಾರತಕ್ಕೆ ಹೆಚ್ಚುವರಿಯಾಗಿ 40 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆ ಮಾಡಲು ಸೌದಿ ಅರೇಬಿಯಾ ಮುಂದಾಗಿದೆ. ನ.4ರಿಂದ ಇರಾನ್ನಿಂದ ಕಚ್ಚಾ ತೈಲ ಖರೀದಿ ಮಾಡಬಾರದು ಎಂದು ಅಮೆರಿಕ ಈಗಾಗಲೇ ಗುಟುರು ಹಾಕಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಬುಧವಾರ ನೀಡಿದ ಈ ಹೇಳಿಕೆ ಮಹತ್ವ ಪಡೆದಿದೆ. ಕಚ್ಚಾ ತೈಲ ಉತ್ಪಾದಿಸುವ ರಾಷ್ಟ್ರಗಳ ಒಕ್ಕೂಟ (ಒಪೆಕ್)ದಲ್ಲಿಯೇ 3ನೇ ಅತಿ ದೊಡ್ಡ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಇರಾನ್ನಿಂದ ಪೂರೈಕೆಯಾಗಲಿರುವ ಕಚ್ಚಾ ತೈಲದ ಕೊರತೆಯನ್ನು ನೀಗಿಸಲಿದೆ.
ಮಂಗಳೂರು ರಿಫೈನರೀಸ್ ಆ್ಯಂಡ್ ಪೆಟ್ರೋಕೆಮಿಕಲ್ಸ್ (ಎಂಆರ್ಪಿಎಲ್), ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ನವೆಂಬರ್ಗೆ ಒಂದು ದಶಲಕ್ಷ ಬ್ಯಾರೆಲ್ ಪೂರೈಸುವಂತೆ ಅಮೆರಿಕದ ಮಿತ್ರ ರಾಷ್ಟ್ರಕ್ಕೆ ಮನವಿ ಮಾಡಿವೆ ಎಂದು “ರಾಯಿಟರ್ಸ್’ ವರದಿ ಮಾಡಿದೆ. ಅಮೆರಿಕ ಕೂಡ ಭಾರತಕ್ಕೆ ಇರಾನ್ನಿಂದ ಪೂರೈಕೆಯಾಗುವ ಕಚ್ಚಾ ತೈಲ ಕೊರತೆಯಾದಲ್ಲಿ ಬದಲಿ ವ್ಯವಸ್ಥೆ ಮಾಡುವುದಾಗಿ ಇತ್ತೀಚೆಗೆ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂದ್ರಾ- ವರ್ಲಿ ಸೀ ಲಿಂಕ್ಗೆ 25,000 ಟನ್ ಗರ್ಡರ್ ಅಳವಡಿಕೆ
Telangana: ಪಿಯು ಫಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ