ಕುಂಭ ಮೇಳದಲ್ಲಿ ಒಂಟಿ ತೋಳದ ದಾಳಿ:ಐಸಿಸ್ ಆಡಿಯೋ
Team Udayavani, Nov 15, 2017, 10:16 AM IST
ಹೊಸದಿಲ್ಲಿ: ಕುಂಭ ಮೇಳ ಮತು ತ್ರಿಶೂರ್ ಪೂರಂ ವಾರ್ಷಿಕ ಜಾತ್ರೆಯ ವೇಳೆ ಲಾಸ್ ವೇಗಾಸ್ನಲ್ಲಿ ನಡೆದ ಒಂಟಿ ತೋಳ ಮಾದರಿಯ ಭೀಕರ ದಾಳಿ ನಡೆಸುವುದಾಗಿ ಐಸಿಸ್ ಉಗ್ರ ಸಂಘಟನೆಯ ಆಡಿಯೋವೊಂದು ಬಿಡುಗಡೆಯಾಗಿ ಭೀತಿ ಮೂಡಿಸಿದೆ.
10 ನಿಮಿಷದ ಆಡಿಯೋ ಮಲಯಾಳಂ ಭಾಷೆಯಲ್ಲಿದ್ದು , ಪುರುಷನ ಧ್ವನಿಯಲ್ಲಿ ಖುರಾನ್ನ ಕೆಲ ವಿಚಾರಗಳನ್ನು ಉಲ್ಲೇಖ ಮಾಡಿ ಭೀಕರ ದಾಳಿ ನಡೆಸುವ ಬೆದರಿಕೆ ಹಾಕಲಾಗಿದೆ.
ಐಸಿಸ್ ಬೆಂಬಲಿಸುವ ದೌಲಾತ್ ಇಸ್ಲಾಂ ಸಂಘಟನೆ ಈ ಆಡಿಯೋ ಬಿಡುಗಡೆ ಮಾಡಿದೆ ಎಂದು ಶಂಕಿಸಲಾಗಿದ್ದು, ಈಗಾಗಲೇ ಇಂತಹ 50 ಕ್ಕೂ ಆಡಿಯೋಗಳು ಬಿಡುಗಡೆಯಾಗಿವೆ ಎಂದು ತಿಳಿದು ಬಂದಿದೆ.
ಈ ಆಡಿಯೋವನ್ನು ಟೆಲಿಗ್ರಾಂ ಮೆಸೆಂಜರ್ನಿಂದ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಡಿಯೋದಲ್ಲಿ ನಿಮ್ಮ ಬುದ್ಧಿ ಶಕ್ತಿ ಉಪಯೋಗಿಸಿ,ಕುಂಭ ಮೇಳ ಮತ್ತು ತ್ರಿಶೂರ್ ಪೂರಂ ನಲ್ಲಿ ಭಕ್ತರ ಆಹಾರದಲ್ಲಿ ವಿಷ ಹಾಕಿ. ಟ್ರಕ್ಗಳನ್ನು ಬಳಸಿ ಜನರ ಮೈಮೇಲೆ ಹರಿಸಿ. ಐಎಸ್ ಮುಜಾಹಿದ್ದೀನ್ಗಳು ಇದನ್ನು ವಿಶ್ವದೆಲ್ಲೆಡೆ ಮಾಡುತ್ತಿದ್ದಾರೆ. ಲಾಸ್ ವೇಗಾಸ್ನಲ್ಲೂ ಇಂತಹ ದಾಳಿ ನಡೆದಿದೆ ಎಂದಿರುವುದು ಆಡಿಯೋದಲ್ಲಿ ಕೇಳಿ ಬಂದಿದೆ.
ಕೇರಳ ರಾಜ್ಯದ 100ಕ್ಕೂ ಹೆಚ್ಚು ಜನರು ಐಸಿಸ್ ಸೇರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ