ISRO ಹೊಸ ವರ್ಷದ ಮೊದಲ ದಿನವೇ ಇಸ್ರೋ ಸಾಹಸ

ಕಪ್ಪುಕುಳಿ ಅಧ್ಯಯನಕ್ಕೆ ಇಂದು ಉಪಗ್ರಹ ನಭಕ್ಕೆ

Team Udayavani, Jan 1, 2024, 7:10 AM IST

isroಹೊಸ ವರ್ಷದ ಮೊದಲ ದಿನವೇ ಇಸ್ರೋ ಸಾಹಸ

ಶ್ರೀಹರಿಕೋಟ: ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಹೊಸ ಸಾಹಸಕ್ಕೆ ಮುಂದಡಿ ಇರಿಸಿದೆ.

ಬಾಹ್ಯಾಕಾಶದಲ್ಲಿ ಕಂಡುಬರುವ ಪ್ರಬಲವಾದ ಕ್ಷಕಿರಣಗಳನ್ನು ಅಧ್ಯ ಯನ ಮಾಡುವ ಎಕ್ಸ್‌ಪೊಸ್ಯಾಟ್‌ ಉಪಗ್ರಹವನ್ನು ಸೋಮವಾರ ಇಸ್ರೋ ಉಡಾವಣೆ ಮಾಡಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಉಡಾವಣ ನೆಲೆಯಿಂದ ಬೆಳಗ್ಗೆ 9.10ಕ್ಕೆ ಪಿಎಸ್‌ಎಲ್‌ವಿ-ಸಿ58 ರಾಕೆಟ್‌ ಮೂಲಕ ಎಕ್ಸ್‌ಪೋಸ್ಯಾಟ್‌ ನಭಕ್ಕೆ ನೆಗೆಯಲಿದೆ. ಅದಕ್ಕೆ ಬೆಳಗ್ಗೆ 8.10ರಿಂದಲೇ ಕ್ಷಣಗಣನೆ ಪ್ರಾರಂಭವಾಗಲಿದೆ.

ಗಮನಾರ್ಹ ಅಂಶವೆಂದರೆ ಪಿಎಸ್‌ಎಲ್‌ವಿ- ಸಿ58ಕ್ಕೆ ಇದು 60ನೇ ಉಡಾವಣೆ. ಬಾಹ್ಯಾಕಾಶದಲ್ಲಿರುವ ಕಪ್ಪುಕುಳಿ (ಬ್ಲ್ಯಾಕ್‌ ಹೋಲ್‌) ಸಹಿತ ಅಲ್ಲಿ ಹೊರಹೊಮ್ಮುವ ಕ್ಷಕಿರಣಗಳ ಮೂಲ ವನ್ನು ಅಧ್ಯಯನ ಮಾಡಲು ಇಸ್ರೋ ಮೊದಲ ಬಾರಿ ಹೆಜ್ಜೆ ಇರಿಸಿದೆ. ಹಾಗಾಗಿ ಇಡೀ ಜಗತ್ತು ಈ ಉಡಾವಣೆಯನ್ನು ಕುತೂ ಹಲದಿಂದ ನೋಡುತ್ತಿದೆ. ಇದು ಜಗತ್ತಿನಲ್ಲೇ ದ್ವಿತೀಯ ಪ್ರಯತ್ನ.

ಇದಕ್ಕಿಂತ ಮುನ್ನ ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ 2021ರಲ್ಲಿ ಎಕ್ಸ್‌ ರೇ ಪೊಲಾರಿಮೆಟ್ರಿ ಎಕ್ಸ್‌ಪ್ಲೋರರ್‌ ಉಪಗ್ರಹದ ಮೂಲಕ ಇಂಥದ್ದೇ ಅಧ್ಯಯನ ಕೈಗೊಂಡಿತ್ತು.

11 ಉಪಗ್ರಹಗಳು
ಸೋಮವಾರ ಕೇವಲ ಎಕ್ಸ್‌ ಪೋಸ್ಯಾಟ್‌ ಮಾತ್ರ ಉಡಾವಣೆ ಯಾಗುತ್ತಿಲ್ಲ. ಅದರೊಂದಿಗೆ 10 ಇತರ ಉಪಗ್ರಹಗಳೂ ನಿಗದಿತ ಕಕ್ಷೆ ಸೇರಲಿವೆ.

ಅಧ್ಯಯನದಿಂದ ಲಾಭವೇನು?
ಖಗೋಳಶಾಸ್ತ್ರಜ್ಞರಿಗೆ ಈ ಉಪಗ್ರಹ ದಿಂದ ಬಹಳ ಲಾಭವಾಗಲಿದೆ. ಈ ಉಪಗ್ರಹ ಸುತ್ತುವಾಗ ಸಣ್ಣ ಧೂಮಕೇತುಗಳಿಂದ ಹಿಡಿದು ದೂರದ ಆಕಾಶಕಾಯಗಳ ಬಗ್ಗೆಯೂ ಮಾಹಿತಿ ಸಿಗಲಿದೆ. ಬಾಹ್ಯಾ ಕಾಶದಲ್ಲಿರುವ ದ್ರವ್ಯಗಳು ಒಂದು ರೂಪ ಪಡೆಯುವು ದನ್ನು, ಅವು ಬೇರೆಬೇರೆ ಕಡೆಗೆ ಹರಡುವುದನ್ನು ಅರ್ಥ ಮಾಡಿಕೊಳ್ಳಬಹುದು.

ಬೆಂಗಳೂರಿನ ಬೆಲೇಟ್ರಿಕ್ಸ್‌ ಸಹಿತ
4 ಸ್ಟಾರ್ಟಪ್‌ಗಳ ಪೇಲೋಡ್‌
ಇಸ್ರೋದ ನೌಕೆಯಲ್ಲಿ ಬೆಂಗಳೂರಿನ ಬೆಲೇಟ್ರಿಕ್ಸ್‌ ಏರೋಸ್ಪೇಸ್‌ ಸಹಿತ ದೇಶದ ಒಟ್ಟು ನಾಲ್ಕು ಬಾಹ್ಯಾಕಾಶ ಸಂಬಂಧಿ ಸ್ಟಾರ್ಟಪ್‌ ಗಳು ತಮ್ಮ ಪೇಲೋಡ್‌ಗಳನ್ನು ಸೇರಿಸಿವೆ. ಬೆಲೇಟ್ರಿಕ್ಸ್‌ ಸಂಸ್ಥೆ ರುದ್ರ 0.3 ಎಚ್‌ಪಿ ಜಿಪಿ ಎಂಬ ಥÅಸ್ಟರ್‌, ಅರ್ಕ-200 ಎಂಬ ಕಡಿಮೆ ಬಿಸಿಯಾಗುವ ಥಸ್ಟರ್‌ ಅನ್ನು ಸೇರಿಸಿದೆ. ಹೈದರಾಬಾದ್‌ನ ಧ್ರುವ ಸ್ಪೇಸ್‌ ಸಂಸ್ಥೆ ಲೀಪ್‌-ಟಿಡಿಯನ್ನು, ಟೇಕ್‌ಮಿ2ಸ್ಪೇಸ್‌ ಸಂಸ್ಥೆಯು ಆರ್‌ಎಸ್‌ಇಎಂ, ಮುಂಬಯಿಯ ಇನ್‌ಸ್ಪೆಸಿಟಿ ಸ್ಪೇಸ್‌ ಲ್ಯಾಬ್ಸ್ ಪ್ರೈ.ಲಿ. ಗಿತಾ ವನ್ನು ಕಳುಹಿಸಿಕೊಡಲಿವೆ. ಪೋಲಿಕ್ಸ್‌ ಅನ್ನು ಬೆಂಗಳೂರಿನ ರಾಮನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಯು.ಆರ್‌. ರಾವ್‌ ಸ್ಯಾಟ ಲೈಟ್‌ ಸೆಂಟರ್‌ ಸಹಯೋಗದೊಂದಿಗೆ ನಿರ್ಮಿಸಿದೆ.

ಉದ್ದೇಶವೇನು?
-ಬಾಹ್ಯಾಕಾಶದ ಅಪರಿಚಿತ ಮೂಲಗಳಿಂದ ಹೊಮ್ಮುವ ಕ್ಷಕಿರಣಗಳು, ಅವು ಚದುರುವ ರೀತಿಯನ್ನು ಅಧ್ಯಯನ ಮಾಡು ವುದು ಮೂಲ ಉದ್ದೇಶ.
-ಬಾಹ್ಯಾಕಾಶದಲ್ಲಿರುವ ಕಾಂತೀಯ ವಲಯದ ವ್ಯಾಪ್ತಿಯನ್ನು ಅರಿಯುವುದು, ಬಾಹ್ಯಾಕಾಶದಿಂದ ಹೊಮ್ಮುವ ಬ್ರಹ್ಮಕಿರಣಗಳ (ಕಾಸ್ಮಿಕ್‌ ರೇ) ಸ್ವರೂಪವನ್ನು ಅಧ್ಯಯನ ಮಾಡುವುದು.
-ಕ್ಷ ಕಿರಣಗಳ ಉತ್ಪಾದನ ಕ್ರಮವನ್ನು ತಿಳಿಯುವುದು
-ಕಪ್ಪುಕುಳಿ (ಬ್ಲ್ಯಾಕ್‌ಹೋಲ್‌)ಗಳ ಭಿನ್ನ ಮೂಲಗಳನ್ನು ಅರ್ಥ ಮಾಡಿಕೊಳ್ಳುವುದು.
-ನಕ್ಷತ್ರಗಳ ಸ್ಫೋಟದ ಅನಂತರ ಉಳಿಯುವ ಅವಶೇಷಗಳಿಂದ ಹೊಮ್ಮುವ ಉಷ್ಣವನ್ನು ಅರ್ಥ ಮಾಡಿಕೊಳ್ಳುವುದು.

ಟಾಪ್ ನ್ಯೂಸ್

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.