ISRO; ಮುಂದಿನ 5 ವರ್ಷಗಳಲ್ಲಿ 50 ಬೇಹು ಉಪಗ್ರಹ ನಭಕ್ಕೆ
ಭಾರತ ಬಲಿಷ್ಠಗೊಳ್ಳಲು ಉಪಗ್ರಹ ಸಂಖ್ಯೆ ಹೆಚ್ಚಳ ಅನಿವಾರ್ಯ
Team Udayavani, Dec 30, 2023, 5:12 AM IST
ಹೊಸದಿಲ್ಲಿ: ಜಾಗತಿಕ ಗುಪ್ತಚರ ಉದ್ದೇಶಕ್ಕಾಗಿ, ಮುಂದಿನ ಐದು ವರ್ಷಗಳಲ್ಲಿ ಭಾರತ 50 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ವಿವಿಧ ಕಕ್ಷೆಗಳಲ್ಲಿರುವ ವಿವಿಧ ಉಪಗ್ರಹ ಗಳ ಒಂದು ಪದರವನ್ನೇ ಸಿದ್ಧಪಡಿಸಲಾಗುವುದು ಎಂದು ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಸ್ಥೆ) ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ.
ಇಸ್ರೋ ಹೊಸತಾಗಿ ಉಡಾವಣೆ ಮಾಡಲು ಉದ್ದೇಶಿಸಿರುವ ಉಪಗ್ರಹಗಳು, ಸೇನಾ ಪಡೆಗಳ ಚಲನೆ, ಸಾವಿರಾರು ಕಿ.ಮೀ. ಪ್ರದೇಶಗಳ ಚಿತ್ರಗಳನ್ನು ತೆಗೆಯಲಿವೆ. ಭಾರತವನ್ನು ಅತ್ಯಂತ ಬಲಿಷ್ಠಗೊಳಿಸ ಬೇಕಾದರೆ, ಈಗಿರುವ ಉಪಗ್ರಹಗಳ ಸಂಖ್ಯೆಯನ್ನು ಇನ್ನೂ 10 ಪಟ್ಟು ಹೆಚ್ಚಿಸಬೇಕು. ಸದ್ಯ ಇರುವ ಉಪಗ್ರಹಗಳು ತೀರಾ ಕಡಿಮೆ ಎಂದು ಸೋಮನಾಥ್ ಹೇಳಿದ್ದಾರೆ. ಜಾಗತಿಕವಾಗಿ ಆಗುವ ಬದಲಾ ವಣೆಗಳನ್ನು ಗುರುತಿಸಲು, ನೆರೆಯ ದೇಶಗಳ ಚಲನೆಯನ್ನು ಗಮನಿಸಲು, ಗಡಿಭಾಗದಲ್ಲಿ ನಿಗಾ ಇಡಲು ಉಪಗ್ರಹಗಳ ಅಗತ್ಯವಿದೆ. ಹಾಗೆಯೇ ಅನವಶ್ಯಕವಾಗಿ ದತ್ತಾಂಶಗಳನ್ನು ಡೌನ್ಲೋಡ್ ಮಾಡುವ ಬದಲು, ದತ್ತಾಂಶಗಳನ್ನು ವಿಶ್ಲೇಷಿಸಿ ಬಳಸಿಕೊಳ್ಳಲು ಎಐ ಸಾಧನಗಳ ಅಗತ್ಯವಿದೆ. ಇಸ್ರೋ ಉಪಗ್ರಹಗಳು ಮೇಲಿನ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶ ಹೊಂದಿವೆ ಎಂದು ಸೋಮನಾಥ್ ಟೆಕ್ಫೆಸ್ಟ್ ವಿಜ್ಞಾನ ಸಮಾವೇಶವೊಂದರಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು