ಕಿಷ್‌ತ್‌ವಾರ್‌ ಸುಧಾರಣೆ: ಕರ್ಫ್ಯೂ ಸಡಿಲಿಕೆ, ಇಂಟರ್‌ನೆಟ್‌ ಸೇವೆ ಪುನರ್‌ ಸ್ಥಾಪನೆ

Team Udayavani, Apr 15, 2019, 7:01 PM IST

ಜಮ್ಮು : ಜಮ್ಮು ಕಾಶ್ಮೀರದ ಕಿಷ್‌ತ್‌ವಾರ್‌ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸುಧಾರಿಸಿರುವ ಕಾರಣ ಕಳೆದ ಆರು ದಿನಗಳಿಂದ ಅಮಾನತುಗೊಂಡಿದ್ದ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಪುನರ್‌ ಸ್ಥಾಪಿಸಲಾಗಿದೆ ಮತ್ತು ಮೂರು ತಾಸುಗಳ ಮಟ್ಟಿಗೆ ಸಡಿಲುಗೊಳಿಸಲಾಗಿದೆ ಎಂದು ಹಿರಿಯ ಸರಕಾರಿ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವಾರ ಉಗ್ರರು ಹಿರಿಯ ಆರ್‌ಎಸ್‌ಎಸ್‌ ನಾಯಕ ಚಂದ್ರಕಾಂತ ಶರ್ಮಾ ಮತ್ತು ಅವರು ಸೆಕ್ಯುರಿಟಿ ಗಾರ್ಡನ್ನು ಗುಂಡಿಕ್ಕಿ ಕೊಂದಿದ್ದರು; ಈ ಘಟನೆಯನ್ನು ಅನುಸರಿಸಿ ಹಿಂಸೆ, ಪ್ರತಿಭಟನೆ ಭುಗಿಲೆದ್ದಿತ್ತು.

ಪರಿಸ್ಥಿತಿಯನ್ನು ನಿಯಂತ್ರಿಸಲು ಕರ್ಫ್ಯೂ ಹೇರಲಾಗಿತ್ತು. ಅದಾಗಿ ಇಂದು ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿರುವುದರಿಂದ ಇಂದು ಸೋಮವಾರ ಮಧ್ಯಾಹ್ನ 12ರಿಂದ 3 ಗಂಟೆಯ ವರೆಗೆ ಕರ್ಫ್ಯೂ ಸಡಿಲಿಸಲಾಯಿತು. ಇಂಟರ್‌ ಮೊಬೈಲ್‌ ಸೇವೆಯನ್ನು ಪುನರ್‌ ಸ್ಥಾಪಿಸಲಾಯಿತು ಎಂದು ಅಧಿಕಾರಿ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ