ಟಿಕ್‌ಟಾಕ್‌ ಆ್ಯಪ್‌ ನಿಷೇಧಕ್ಕೆ ಜಾಗರಣ್‌ ಮಂಚ್‌ ಆಗ್ರಹ

Team Udayavani, Jul 15, 2019, 5:11 AM IST

ಹೊಸದಿಲ್ಲಿ: ವೀಡಿಯೋ ಶೇರಿಂಗ್‌ ಆ್ಯಪ್‌ ಗಳಾದ ಟಿಕ್‌ ಟಾಕ್‌ ಹಾಗೂ ಹೆಲೋವನ್ನು ನಿಷೇಧಿಸಬೇಕು. ಅದು ರಾಷ್ಟ್ರ ವಿರೋಧಿಯಾಗಿದೆ ಎಂದು ಆರ್‌ಎಸ್‌ಎಸ್‌ಗೆ ಸಂಯೋಜಿತ ವಾಗಿರುವ ಸ್ವದೇಶಿ ಜಾಗರಣ್‌ ಮಂಚ್‌ (ಎಸ್‌ಜೆಎಂ) ಒತ್ತಾಯಿಸಿದೆ. ಈ ಬಗ್ಗೆ ಸಂಘಟನೆಯ ಸಹ- ಸಂಯೋಜಕ ಅಶ್ವನಿ ಮಹಾಜನ್‌ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ಟಿಕ್‌ ಟಾಕ್‌ ಆ್ಯಪ್‌ ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಬಳಕೆಯಾಗುತ್ತಿದೆ. ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಶೇರ್‌ ಮಾಡಲಾಗುತ್ತಿದೆ. ಅದು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರಲಿದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ. ಇನ್ನು ಹೆಲೋ ಬಗ್ಗೆ “ಸಾಮಾ ಜಿಕ ಜಾಲತಾಣಗಳಲ್ಲಿ 11 ಸಾವಿರ ಮಾರ್ಪಡಿಸಿದ ರಾಜಕೀಯ ಜಾಹೀರಾತುಗಳಿಗೆ 7 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಪಾವತಿ ಮಾಡಿದೆ. ಮಾರ್ಪಡಿಸಿದ ರಾಜಕೀಯ ಜಾಹೀರಾತುಗಳಲ್ಲಿ ಬಿಜೆಪಿ ನಾಯಕರದ್ದೂ ಸೇರಿದಂತೆ ದೇಶದ ಪ್ರಮುಖ ನಾಯಕರದ್ದು ಇದೆ. ಈ ಬಗ್ಗೆ ಚುನಾವಣೆ ಅವಧಿಯಲ್ಲಿ ಬಿಜೆಪಿ ನಾಯಕರೇ ಚುನಾವಣಾ ಆಯೋಗಕ್ಕೆ ನಿಷೇಧ ಕೋರಿ ಪತ್ರ ಬರೆದಿದ್ದರು’ ಎಂದು ಹೇಳಿ ಕೊಂಡಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ