ಎಲ್ಓಸಿಯಲ್ಲಿ ಪಾಕ್ ಗುಂಡಿನ ದಾಳಿ: 22ರ ಭಾರತೀಯ ಯುವಕ ಬಲಿ
Team Udayavani, May 11, 2018, 12:03 PM IST
ಜಮ್ಮು : ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿನ ಭಾರತೀಯ ಸೇನೆಯ ಹೊರಠಾಣೆಗಳನ್ನು ಗುರಿ ಇರಿಸಿಕೊಂಡು ಪಾಕ್ ಸೈನಿಕರು ಸಣ್ಣ ಮಟ್ಟದ ಶಸ್ತ್ರಾಸ್ತ್ರಗಳಿಂದ ನಡೆಸಿದ ದಾಳಿಗೆ 22 ವರ್ಷ ಪ್ರಾಯದ ಯುವಕನೋರ್ವ ಬಲಿಯಾಗಿದ್ದಾನೆ.
ಪೂಂಚ್ ಜಿಲ್ಲೆಯ ಗುಲ್ಪುರ – ಬಾಗ್ಯಾಲ್ ಧಾರಾ ಪಟ್ಟಿಯಲ್ಲಿನ ಎಲ್ಓಸಿಯಲ್ಲಿ ಪಾಕ್ ಸೈನಿಕರು ನಸುಕಿನ 12.30ರ ವೇಳೆಗೆ ಗುಂಡಿನ ದಾಳಿ ನಡೆಸಿದರು ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಮೊಹಮ್ಮದ್ ಇಖಲಾಕ್ ಎಂದು ಗುರುತಿಸಲಾಗಿದ್ದು ಆತನು ಕಲ್ಸಾನ್ ಮಾಲ್ಟಿ ಬಘಾಲ್ ಧಾರಾ ನಿವಾಸಿ ಎಂದು ಗೊತ್ತಾಗಿದೆ. ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಸಾವಪ್ಪಿದ ಎಂದು ಸೇನೆಯ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!