ಜಮ್ಮುವಿನ ದಾಸ್ತಾನು ಕೇಂದ್ರದಲ್ಲಿ ಇನ್ನು ಮುಂದೆ ಸಂಸ್ಕೃತದಲ್ಲಿ ಬಿಲ್!
Team Udayavani, Nov 29, 2022, 6:30 PM IST
ಜಮ್ಮು: ಇನ್ನು ಮುಂದೆ ಜಮ್ಮುವಿನ ಅತಿದೊಡ್ಡ ದಾಸ್ತಾನು ಕೇಂದ್ರದಲ್ಲಿ ಸರಕುಗಳ ದರಪಟ್ಟಿ ಸಂಸ್ಕೃತ ಭಾಷೆಯಲ್ಲೇ ಇರಲಿದೆ!
ಸಂಸ್ಕೃತವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರದ ವ್ಯಾಪಾರಿಗಳ ಸಂಘವೊಂದು ಇಂಥ ನಿರ್ಧಾರ ಕೈಗೊಂಡಿದೆ.
ಅಷ್ಟೇ ಅಲ್ಲ, ಕೇಂದ್ರಾಡಳಿತ ಪ್ರದೇಶದ ಅತಿದೊಡ್ಡ ಮತ್ತು ಅತಿ ಪ್ರಾಚೀನ “ಧಾನ್ಯ ಮಂಡಿ’ಯಲ್ಲಿ ಮಂಗಳವಾರ “ಸಂಸ್ಕೃತ ಮಾರುಕಟ್ಟೆ’ಯನ್ನೂ ಸಂಘವು ಲೋಕಾರ್ಪಣೆ ಮಾಡಿದೆ.
ನ.30ರಂದು ವ್ಯಾಪಾರಿಗಳು ಮತ್ತು ಅವರ ಸಿಬ್ಬಂದಿಗೆ ಸಂಸ್ಕೃತ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ಸಂಸ್ಕೃತ ವಿವಿ ನಿರ್ದೇಶಕ ಪ್ರೊ. ಮದನ್ ಮೋಹನ್ ಝಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಸುಪ್ರೀಂ ಕೋರ್ಟ್ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು
ನಾಗಾಲ್ಯಾಂಡ್ ಚುನಾವಣೆ; 28 ಕೋಟಿ ರೂ.ಗೂ ಹೆಚ್ಚು ನಿಷೇಧಿತ ವಸ್ತುಗಳ ವಶ
ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ: ಕಾಂಗ್ರೆಸ್ 21 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
ಉಚಿತ ವೇಷ್ಟಿ, ಸೀರೆಗಳಿಗೆ ಮುಗಿಬಿದ್ದ ಜನ; ನಾಲ್ವರು ಮಹಿಳೆಯರ ಮೃತ್ಯು