Japan commits; ಭಾರತದ 9 ಯೋಜನೆಗಳಿಗೆ ಜಪಾನ್ 12,800 ಕೋಟಿ ನೆರವು
Team Udayavani, Feb 20, 2024, 7:30 PM IST
ನವದೆಹಲಿ: ಭಾರತದ ವಿವಿಧ ವಲಯಗಳ 9 ಯೋಜನೆಗಳಿಗೆ 12,800 ಕೋಟಿ ರೂ. ಸಾಲ ನೀಡಲು ಜಪಾನ್ ಸರ್ಕಾರ ಒಪ್ಪಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಈಶಾನ್ಯ ರಸ್ತೆ ಸಂಪರ್ಕ ಯೋಜನೆ, ತೆಲಂಗಾಣದಲ್ಲಿ ಸ್ಟಾರ್ಟ್ಅಪ್ ಮತ್ತು ನಾವೀ ನ್ಯತೆ ಉತ್ತೇಜಿಸುವ ಯೋಜನೆ, ಚೆನ್ನೈನಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, ಹರ್ಯಾಣದಲ್ಲಿ ಸುಸ್ಥಿರ ತೋಟಗಾರಿಕೆ ಉತ್ತೇಜಿಸುವ ಯೋಜನೆ ಹಾಗೂ ರಾಜಸ್ಥಾನದಲ್ಲಿ ಹವಾಮಾನ ಬದಲಾವಣೆ ಪ್ರತಿಕ್ರಿಯೆ ಮತ್ತು ಪರಿಸರ ಸೇವೆಗಳ ವರ್ಧನೆ ಯೋಜನೆಗಳು ಇದರಲ್ಲಿವೆ. ಈ ಕುರಿತ ಒಪ್ಪಂದಕ್ಕೆ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ಮತ್ತು ಭಾರತಕ್ಕೆ ಜಪಾನ್ ರಾಯಭಾರಿ ಸುಜುಕಿ ಹಿರೋಶಿ ಸಹಿ ಹಾಕಿದ್ದಾರೆ.