ಶಿವಮೊಗ್ಗದಲ್ಲಿ ಜೆಡಿಎಸ್ ಮತಬೇಟೆ; ಮಂಡ್ಯದಲ್ಲಿ ಮತ್ತೆ “ಕೈ”ಗೆ IT ಶಾಕ್!
Team Udayavani, Apr 3, 2019, 3:28 PM IST
ಮಂಡ್ಯ: ಲೋಕಸಭಾ ಚುನಾವಣಾ ಅಖಾಡ ರಂಗೇರತೊಡಗಿದ್ದು, ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಸ್ಯಾಂಡಲ್ ವುಡ್ ನ ನಟ ದರ್ಶನ್ ಹಾಗೂ ಯಶ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕ ಎಂಎಸ್ ಆತ್ಮಾನಂದ ಮನೆ ಮೇಲೆ ಐಟಿ ದಾಳಿ ನಡೆದಿದೆ.
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜೆಡಿಎಸ್ ಮುಖಂಡರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಕ್ಕೆ ಕಾಂಗ್ರೆಸ್, ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ದೋಸ್ತಿಗಳ ಧರಣಿ, ಪ್ರತಿಭಟನೆ ನಡುವೆಯೇ ಐಟಿ ಅಧಿಕಾರಿಗಳು ದಾಳಿಯನ್ನು ಮುಂದುವರಿಸಿದ್ದಾರೆ.
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಂಎಸ್ ಆತ್ಮಾನಂದ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ವಹಿವಾಟು, ವ್ಯವಹಾರಗಳ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ನಮ್ಮವರೆಲ್ಲಾ ನ್ಯಾಯಬದ್ಧವಾಗಿಯೇ ಇದ್ದಾರೆ:ಡಿಕೆಶಿ
ನಮ್ಮವರೆಲ್ಲಾ ನ್ಯಾಯಬದ್ಧವಾಗಿಯೇ ಇದ್ದಾರೆ. ರಾಜಕೀಯವಾಗಿ ನಮ್ಮ ಜನರನ್ನು ಕಟ್ಟಿ ಹಾಕಲು ಮುಂದಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್ ಸಡಿಲವಾಗಿ ಧರಿಸಿದ್ದರೂ ದಂಡ!
ಕಪ್ಪುರಂಧ್ರದ 500ನೇ ಮರುಹುಟ್ಟನ್ನು ಸೆರೆಹಿಡಿದ ಆಸ್ಟ್ರೋಸ್ಯಾಟ್
ಜ್ಞಾನವಾಪಿ ಕೊಠಡಿ ಇದುವೇ! ಶೃಂಗಾರ್ ಕಾಂಪ್ಲೆಕ್ಸ್ನ ಕೆಳಭಾಗದಲ್ಲಿರುವ ಕೋಣೆಯ ಚಿತ್ರ
ಏಕಸ್ವಾಮ್ಯವು ದೇಶಕ್ಕೆ ಅಪಾಯಕಾರಿ ಎಂದ ಕಾಂಗ್ರೆಸ್ ನಾಯಕ ರಾಹುಲ್ ಹೇಳಿಕೆಗೆ ಬಿಜೆಪಿ ಕೆಂಡ
Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್ ರೆಕಗ್ನಿಷನ್ ಇನ್ನು ಅಧಿಕೃತ ಪುರಾವೆ