ಎಲ್ಪಿಜಿ ಸಿಲಿಂಡರ್ ದರ 1.50 ಪೈಸೆ ಹೆಚ್ಚಳ
Team Udayavani, Oct 2, 2017, 6:00 AM IST
ನವದೆಹಲಿ: ಎಲ್ಪಿಜಿ ಸಬ್ಸಿಡಿಯನ್ನು ಮುಂದಿನ ಮಾರ್ಚ್ ವೇಳೆಗೆ ಸಂಪೂರ್ಣವಾಗಿ ತೆಗೆದುಹಾಕಲು ನಿರ್ಧರಿಸಿರುವ ಕೇಂದ್ರ ಸರ್ಕಾರವು ಭಾನುವಾರ ಅಡುಗೆ ಅನಿಲ(ಎಲ್ಪಿಜಿ) ಸಿಲಿಂಡರ್ ದರವನ್ನು ಮತ್ತೆ 1.50 ಪೈಸೆ ಹೆಚ್ಚಿಸಿದೆ.
ಕಳೆದ ತಿಂಗಳ ಆರಂಭದಲ್ಲಿ ಸಿಲಿಂಡರ್ ದರ 7 ರೂ.ಗಳಷ್ಟು ಏರಿಕೆಯಾಗಿತ್ತು. ಪ್ರತಿ ತಿಂಗಳು 4 ರೂ.ಗಳಂತೆ ಎಲ್ಪಿಜಿ ದರವನ್ನು ಏರಿಕೆ ಮಾಡುತ್ತಾ, ಕ್ರಮೇಣವಾಗಿ ಮಾರ್ಚ್ ವೇಳೆಗೆ ಸಂಪೂರ್ಣ ಸಬ್ಸಿಡಿ ತೆಗೆದುಹಾಕುವಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಸೂಚಿಸಿರುವುದಾಗಿ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜುಲೈನಲ್ಲಿ ಲೋಕಸಭೆಗೆ ಮಾಹಿತಿ ನೀಡಿದ್ದರು. ಭಾನುವಾರದ ಏರಿಕೆಯಿಂದಾಗಿ ದೆಹಲಿಯಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರ 488.68ಕ್ಕೆ ತಲುಪಿದಂತಾಗಿದೆ.
ಕಳೆದ ವರ್ಷದ ಜುಲೈನಿಂದ ಎಲ್ಪಿಜಿ ದರ ಪ್ರತಿ ತಿಂಗಳೂ ಏರಿಕೆಯಾಗುತ್ತಿದ್ದು, 2016ರ ಜೂನ್ನಿಂದ ಈವರೆಗೆ ಸುಮಾರು 69.50ರೂ.ಗಳು ಏರಿಕೆಯಾಗಿದೆ.
ಇದೇ ವೇಳೆ, ವೈಮಾನಿಕ ಇಂಧನ ದರವನ್ನೂ ಶೇ.6ರಷ್ಟು ಏರಿಕೆ ಮಾಡಲಾಗಿದ್ದು, ಕಿಲೋಲೀಟರ್ಗೆ 53,045 ರೂ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ