ಜಮ್ಮು ಕಾಶ್ಮೀರದ ತೆಹರೀಕ್ ಉಲ್ ಮುಜಾಹಿದೀನ್ ಸಂಘಟನೆಗೆ ನಿಷೇಧ
Team Udayavani, Feb 6, 2019, 6:33 AM IST
ಹೊಸದಿಲ್ಲಿ : ಕಾಶ್ಮೀರ ವಿಮೋಚನೆಗಾಗಿ ಹೋರಾಡುವ ನೆಪದಲ್ಲಿ ಹಲವಾರು ಸರಣಿ ಭಯೋತ್ಪಾದಕ ಕೃತ್ಯಗಳಲ್ಲಿ ಶಾಮೀಲಾಗಿರುವ ಜಮ್ಮು ಕಾಶ್ಮೀರದಲ್ಲಿನ ತೆಹರೀಕ್ ಉಲ್ ಮುಜಾಹಿದೀನ್ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿದೆ.
ಈ ಸಂಬಂಧ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಜಮ್ಮು ಕಾಶ್ಮೀರದ ತೆಹರೀಕ್ ಉಲ್ ಮುಜಾಹಿದೀನ್ ಸಂಘಟನೆಯು ಭಾರತದಲ್ಲಿ ಹಲವಾರು ಸರಣಿ ಉಗ್ರ ಕೃತ್ಯಗಳಲ್ಲಿ ಶಾಮೀಲಾಗಿರುವುದು ಖಚಿತವಿದ್ದು ಇದರ ಸದಸ್ಯರಿಗೆ ವಿದೇಶದಲ್ಲಿರುವ ನಿರ್ವಾಹಕರಿಂದ ಹಣಕಾಸು ಮತ್ತು ಸಾರಿಗೆ ಸೌಕರ್ಯದ ನೆರವು ದೊರಕುತ್ತಿರುವುದು ಕಂಡು ಬಂದಿದೆ ಎಂದು ಹೇಳಿದೆ.
ಕಾಶ್ಮೀರ ವಿಮೋಚನೆಯ ಉದ್ದೇಶದೊಂದಿಗೆ 1990ರಲ್ಲಿ ಅಸ್ತಿತ್ವಕ್ಕೆ ಬಂದ ತೆಹರೀಕ್ ಉಲ್ ಮುಜಾಹಿದೀನ್ ಅನೇಕ ಸರಣಿ ಭಯೋತ್ಪಾದಕ ಕೃತ್ಯಗಳಲ್ಲಿ ಶಾಮೀಲಾಗಿರುವುದು ಕಂಡು ಬಂದಿದೆ ಎಂದು ಸಚಿವಾಲಯದ ಅಧಿಸೂಚನೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!