ಜಮ್ಮು ಕಾಶ್ಮೀರ : ಮೂವರು ಉಗ್ರರ ಹತ್ಯೆ, ಇನ್ನೂ ಇಬ್ಬರು ಉಗ್ರರಿಗಾಗಿ ಶೋಧ
Team Udayavani, Mar 28, 2019, 11:14 AM IST
ಹೊಸದಿಲ್ಲಿ : ಜಮ್ಮು ಕಾಶ್ಮೀರದ ಶೋಪಿಯಾನ್ ನಲ್ಲಿ ಇಂದು ಗುರುವಾರ ನಸುಕಿನ ವೇಳೆ ಭದ್ರತಾ ಪಡೆಗಳು ನಡೆಸಿರುವ ಎನ್ಕೌಂಟರ್ನಲ್ಲಿ ಮೂವರು ಉಗ್ರರ ಹತರಾಗಿದ್ದಾರೆ.
ಜಮ್ಮು ಕಾಶ್ಮೀರದ ಶೋಪಿಯಾನ್ ನ ಕೆಲ್ಲಾರ್ ಪ್ರದೇಶದಲ್ಲಿ ಇಂದು ಗುರುವಾರ ನಸುಕಿನ ವೇಳೆ ಸಿಆರ್ಪಿಎಫ್, ಸೇನೆ ಮತ್ತು ಜಮ್ಮು ಪೊಲೀಸ್ ದಳ ಜಂಟಿಯಾಗಿ ಎನ್ಕೌಂಟರ್ ನಡೆಸಿ, ಮೂವರು ಉಗ್ರರನ್ನು ಹೊಡೆದುರಳಿಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು.
ಇನ್ನೂ ಇಬ್ಬರು ಉಗ್ರರು ಅಡಗಿಕೊಂಡಿರುವುದನ್ನು ಶಂಕಿಸಲಾಗಿದ್ದು ಇಡಿಯ ತಾಣವನ್ನು ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ವರದಿಗಳು ತಿಳಿಸಿವೆ.
ಈ ನಡುವೆ ಶೋಪಿಯಾನ್ನಲ್ಲಿ ಇಂಟರ್ನೆಟ್ ಸೇವೆಯನ್ನು ತತ್ಕಾಲಕ್ಕೆ ಅಮಾನತುಗೊಳಿಸಲಾಗಿರುವುದಾಗಿ ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!