ಸಿಎಂ ಯೋಗಿ ವಿರುದ್ಧ ಪೋಸ್ಟ್‌; ಪತ್ರಕರ್ತ, ಟಿವಿ ಚಾನೆಲ್‌ ಮುಖ್ಯಸ್ಥೆ ಅರೆಸ್ಟ್‌

ಯೋಗಿಗೆ ಮದುವೆ ಪ್ರಸ್ತಾಪ ಕಳುಹಿಸಿದ್ದಾಗಿ ಹೇಳಿಕೊಂಡ ಮಹಿಳೆಯೊಬ್ಬರ ವಿಡಿಯೋ....

Team Udayavani, Jun 9, 2019, 10:31 AM IST

ಹೊಸದಿಲ್ಲಿ /ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರವಿರುದ್ಧ ಸಾಮಾಜಿಕ ತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಾಕಿದ್ದ ದೆಹಲಿ ಮೂಲದ ಪತ್ರಕರ್ತನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ನೋಯ್ಡಾದಲ್ಲಿ ಟಿವಿ ಚಾನೆಲ್‌ ಮುಖ್ಯಸ್ಥೆ ಮತ್ತು ಸಂಪಾದಕರೊಬ್ಬರನ್ನು ಬಂಧಿಸಿದ್ದಾರೆ.

ಪ್ರಶಾಂತ್‌ ಕನೋಜಿಯಾ ಎನ್ನುವ ಫ್ರಿಲ್ಯಾನ್ಸ್‌ ಪತ್ರಕರ್ತರನ್ನು ಲಕ್ನೋದಪೊಲೀಸ್‌ ಅಧಿಕಾರಿಯೊಬ್ಬರ ದೂರಿನ ಅನ್ವಯ ಬಂಧಿಸಲಾಗಿದೆ.

ಮಹಿಳೆಯೊಬ್ಬಳು ಸಿಎಂ ಯೋಗಿ ನಿವಾಸದ ಹೊರಗೆ ನಿಂತು ಮಾತಾಡುವ ವಿಡಿಯೋವರು° ಸಾಮಾಜಿಕ ತಾಣಗಳಲ್ಲಿಕನೋಜಿಯಾ ಪೋಸ್ಟ್‌ ಮಾಡಿದ್ದರು.

ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ನೋಯ್ಡಾದಲ್ಲಿ ಖಾಸಗಿ ಟಿವಿ ಚಾನೆನ್‌ ಮುಖ್ಯಸ್ಥೆ ಇಶಿಕಾ ಸಿಂಗ್‌ ಮತ್ತು ಸಂಪಾದಕ ಅನುಜ್‌ ಶುಕ್ಲಾ ಅವರನ್ನುಬಂಧಿಸಲಾಗಿದೆ. ಯಾವುದೇ ಪರಾಮರ್ಶೆ ಇಲ್ಲದೆ ಮಹಿಳೆಯ ವಿಡಿಯೋವನ್ನುಪ್ರಸಾರ ಮಾಡಿದ ಹಿನ್ನಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಪತ್ರಕರ್ತರ ಬಂಧನಕ್ಕೆ ಹಲವು ಪ್ರಮುಖ ಪತ್ರಕರ್ತರು ಖಂಡನೆ ವ್ಯಕ್ತಪಡಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ