ಭಾರತಕ್ಕೆ ಏರ್‌ಸ್ಪೇಸ್‌ ನಿಷೇಧಿಸಿದರೆ ಏನಾಗುತ್ತದೆ

ಪಾಕ್ ಕೈಗೊಂಡ ಈ ಕ್ರಮದ ಹಿನ್ನೆಲೆ ಏನಾಗಿರಬಹುದು?

Team Udayavani, Aug 28, 2019, 9:42 PM IST

AIR

ಹೊಸದಿಲ್ಲಿ: ಭಾರತ ಕಾಶ್ಮೀರಕ್ಕೆ ನೀಡಿದ 370ನೇ ವಿಧಿಯನ್ನು ಹಿಂಪಡೆದ ಬಳಿಕ ಪಾಕಿಸ್ಥಾನ ಒಂದಲ್ಲ ಒಂದು ರೀತಿಯ ಪ್ರತಿರೋಧ ತೋರಿಸುತ್ತಾ ಬಂದಿದೆ. ಇದೀಗ ತನ್ನಲ್ಲಿರುವ ಎಲ್ಲಾ ಏರ್‌ಸ್ಪೇಸ್‌ ಅನ್ನು ಮುಚ್ಚುವ ಪ್ರಸ್ತಾವನೆಯನ್ನು ಪಾಕ್ ಹೊಂದಿದೆ. ಇದರ ಆರಂಭಿಕ ಹಂತವಾಗಿ ಪ್ರಮುಖ ಕರಾಚಿ ಮಾರ್ಗವನ್ನು ಆ. 31ರ ವರೆಗೆ ಪಾಕ್ ನಿಷೇಧಿಸಿದೆ.

ಏನಿದು ಏರ್‌ಸ್ಪೇಸ್‌?
ಒಂದು ದೇಶ ಇನ್ನೊಂದು ವಾಯು ಪ್ರದೇಶದ ಮೂಲಕ ಹಾರಾಟ ನಡೆಸುವುದಕ್ಕಾಗಿ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ನಡೆಸಲಾಗುತ್ತದೆ. ಇದರ ಅನ್ವಯ ಬೇರೆ ದೇಶದ ವಿಮಾನಗಳು ತನ್ನ ವಾಯು ನೆಲೆಯ ಮೂಲಕ ಸಂಚಾರಕ್ಕೆ ಅನುಮತಿ ಕಲ್ಪಿಸಲಾಗುತ್ತದೆ. ಇದಕ್ಕಾಗಿ ನಿರ್ದಿಷ್ಟ ಮೊತ್ತವನ್ನೂ ನೀಡಲಾಗುತ್ತದೆ.

ಫೆಬ್ರವರಿ 27ರಂದು ಬಾಲಾಕೋಟ್ ಏರ್‌ಸ್ಟ್ರೈಕ್‌ ನಡದ ಬಳಿಕ ಪಾಕಿಸ್ಥಾನ ತನ್ನ ದೇಶದ ಭದ್ರತೆಯ ಕಾರಣವೊಡ್ಡಿ ಏರ್ ಸ್ಪೇಸ್ ಬಂದ್ ಮಾಡಿತ್ತು. ಕೆಲವು ವಾರಗಳ ಬಳಿಕ ತೆರವು ಮಾಡಿತ್ತು. ಇದೀಗ ಮತ್ತೆ ಏರ್ ಸ್ಪೇಸ್ ನಿಷೇಧಿಸಿ ಆಟವಾಡುತ್ತಿದೆ.

ಎಲ್ಲಿಗೆಲ್ಲಾ ಪ್ರಯಾಣ
ಸದ್ಯ ಪಾಕಿಸ್ಥಾನದ ಏರ್ ಸ್ಪೇಸ್ ಬಳಸಿ ಭಾರತದಿಂದ ಐರೋಪ್ಯ ರಾಷ್ಟ್ರಗಳು, ಅಮೆರಿಕ ಮತ್ತು ಅರಬ್ ರಾಷ್ಟ್ರಗಳಿಗೆ ಸಂಚರಿಸಲಾಗುತ್ತದೆ. 50 ವಿಮಾನಗಳು ಈ ಮಾರ್ಗ ಬಳಸಿ ಸಂಚರಿಸುತ್ತವೆ.ಪಾಕ್‌ ತನ್ನ ಏರ್ ಸ್ಪೇಸ್ ನಿಷೇಧಿಸಿದ ಪರಿಣಾಮ ಪರ್ಯಾಯ ದಾರಿಯನ್ನು ಭಾರತ ಬಳಸಲಿದೆ. ಇದು 2-4 ಗಂಟೆ ತಡವಾಗಲಿದೆ.

ಪರ್ಯಾಯ ದಾರಿ
ಭಾರತದ ಏರ್‌ ಇಂಡಿಯಾ, ಸ್ಪೈಸ್‌ ಜೆಟ್‌ ಮತ್ತು ಇಂಡಿಗೋ ವಿಮಾನಗಳು ಪರ್ಯಾಯ ದಾರಿಯನ್ನು ಬಳಸಿ ಸಂಚರಿಸಲಿದೆ. ವಿದೇಶ ವಿಮಾನಯಾನ ಸಂಸ್ಥೆಯಾದ ಏರ್ ಕೆನಡ, ಯುನೈಟೆಡ್ ಏರ್‌ ಲೈನ್ಸ್‌ ಇದೇ ಮಾರ್ಗದಲ್ಲಿ ಸೇವೆ ನೀಡುತ್ತಿವೆ. ಏರ್ ಇಂಡಿಯಾಗೆ ಸುಮಾರು 500 ಕೋಟಿ ರೂ. ನಷ್ಟವಾಗಲಿದೆ. ಇತರ ವಿಮಾನಯಾನ ಸಂಸ್ಥೆಗಳಿಗೆ 60 ಕೋಟಿ ರೂ. ನಷ್ಟವಾಗಲಿದೆ.

ಕುತೂಹಲ ಮೂಡಿಸಿದ ಆ 4 ದಿನ
ಪಾಕಿಸ್ಥಾನ ಭಾರತಕ್ಕೆ ಎಲ್ಲಾ ಏರ್‌ಸ್ಪೇಸ್‌ ನಿಷೇಧಿಸುವ ಮಾತುಗಳನ್ನಾಡಿದ ಬಳಿಕ ಆ. 31ರ ವರೆಗೆ ನಿಷೇಧ ಅನ್ವಯವಾಗುತ್ತದೆ ಎಂದು ಹೇಳಿದೆ. ಇದಕ್ಕೆ ಅಲ್ಲಿ ಕ್ಯಾಬಿನೆಟ್‌ ನ ಅನುಮೋದನೆಯೂ ದೊರಕಿದೆ. ಆದರೆ ಪಾಕಿಸ್ಥಾನ ಯಾಕೆ ಮುಂದಿನ 4 ದಿನಗಳನ್ನು ಮಾತ್ರ ಆಯ್ಕೆ ಮಾಡಿದೆ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಭಾರತದೊಂದಿಗೆ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿದ ಪಾಕ್ ನೀಡಿದ ಈ 4 ದಿನದ ಗಡುವು ಮಾತ್ರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಏನಿರಬಹುದು ಪಾಕ್‌ ನ ಈ ತಂತ್ರದ ಹಿಂದಿನ ರಹಸ್ಯ?
ಸಾಧ್ಯಾಸಾಧ್ಯತೆ 1: ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕ್ ತನ್ನ ಏರ್‌ಸ್ಪೇಸ್‌ ಅನ್ನು ಭಾರತದ ಬಳಸುವುದನ್ನು ನಿಲ್ಲಿಸಿದರೆ ತನಗೆ ಆಗುವ ನಷ್ಟವನ್ನು ಅಂದಾಜು ಮಾಡುತ್ತಿರಬಹುದು.
ಸಾಧ್ಯಾಸಾಧ್ಯತೆ 2: ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ವಿಧಿ 370ನ್ನು ಹಿಂದೆಗೆದ ಬಳಿಕ ವ್ಯಯಕ್ತಿಕವಾಗಿ ಪಾಕ್ ತಲ್ಲಣಕ್ಕೆ ಒಳಗಾಗಿದೆ. ಹೀಗಾಗಿ ಏರ್‌ಸ್ಪೇಸ್‌ ನಿಷೇಧಿಸಿದರೆ ಭಾರತದ ತನ್ನ ನಿರ್ಧಾರ ಬದಲಾಯಿಸಬಹುದೇ ಎಂದೂ ಪರೀಕ್ಷಿಸಬಹುದು.
ಸಾಧ್ಯಾಸಾಧ್ಯತೆ 3: ಭಾರತ ತನ್ನ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳ ಮೂಲಕ ಸಂಪರ್ಕ ಇಟ್ಟುಕೊಳ್ಳುವುದನ್ನು ತಡೆಯುವ ಪ್ರಯತ್ನವಾಗಿರಬಹುದು.
ಸಾಧ್ಯಾಸಾಧ್ಯತೆ 4: ಭಾರತ ಪರ್ಯಾಯ ಏರ್‌ಸ್ಪೇಸ್‌ ಬಳಸಿವುದರಿಂದ ಆರ್ಥಿಕ ಹೊಡೆತಕ್ಕೆ ಸಿಲುಕಿಸುವುದು ಒಂದು ರಣ ತಂತ್ರ.
ಸಾಧ್ಯಾಸಾಧ್ಯತೆ 5: ಈಗಾಗಲೇ ಭಾರತದೊಂದಿಗೆ ಯುದ್ದ ಮಾಡುವ ಮಾತುಗಳನ್ನಾಡಿರುವ ಪಾಕ್, ತನ್ನಲ್ಲಿ ಶಸ್ತ್ರಾಸ್ತ್ರವನ್ನು ಶೇಖರಿಸಿಟ್ಟುಕೊಳ್ಳಲು ಈ ಕ್ರಮದ ಮೊರೆ ಹೋಗಿರುವ ಸಾಧ್ಯತೆ ಇದೆ. ತನ್ನ ವಿಮಾನ ನಿಲ್ದಾಣಗಳ ಮೂಲಕ ಯುಧ್ದೋಪಕರಣವನ್ನು ಸಾಗಿಸಲು ಈ ತಂತ್ರ ಬಳಸಿರಬಹುದು.
ಸಾಧ್ಯಾಸಾಧ್ಯತೆ 6: ಭಾರತದ ಮೇಲೆ ವೈಮಾನಿಕ ಯುದ್ದ ನಡೆಸಲು ತನ್ನ ವಿಮಾನ ನಿಲ್ದಾಣವನ್ನು ಬಳಸುವ ಸಾಧ್ಯತೆ ಇದೆ.
ಸಾಧ್ಯಾಸಾಧ್ಯತೆ 7: ಈಗಾಗಲೇ ಏರ್‌ಸ್ಪೇಸ್‌ ನಿಷೇಧಿಸುವ ಮಾತುಗಳನ್ನಾಡಿರುವ ಪಾಕ್ ತನ್ನ ಮಾತುಗಳನ್ನು ಉಳಿಸುವ ಸಲುವಾಗಿ ಈ ತಿಂಗಳು ಮಾತ್ರ ನಿಷೇಧ ಹೇರಿ ತನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಮುಜುಗರವನ್ನು ತಪ್ಪಿಸಲು ಈ ಕ್ರಮಕೈಗೊಂಡಿರಬಹುದು.

ಟಾಪ್ ನ್ಯೂಸ್

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.