“ಶೇ.99ರಷ್ಟು ಮುಸ್ಲಿಮರು ಮತಾಂತರಗೊಂಡವರು’

Team Udayavani, Nov 17, 2019, 5:57 AM IST

ಹೊಸದಿಲ್ಲಿ: “ಅಯೋಧ್ಯೆಯ ಶ್ರೀರಾಮ, ಕೇವಲ ಹಿಂದೂ  ಗಳಿಂದ ಪೂಜಿಸಲ್ಪಡು ವುದಿಲ್ಲ. ಮುಸ್ಲಿಮ ರಿಂದಲೂ ಆರಾಧಿಸಲ್ಪಡುತ್ತಾನೆ. ಏಕೆಂದರೆ, ಭಾರತದಲ್ಲಿ ರುವ ಶೇ.99ರಷ್ಟು ಮುಸ್ಲಿಮರು, ಮತಾಂತರದ ಮೂಲಕ ಇಸ್ಲಾಂ ಧರ್ಮಕ್ಕೆ ಪರಿವರ್ತನೆ ಗೊಂಡವರೇ ಆಗಿದ್ದಾರೆ’ ಎಂದು ಯೋಗಗುರು ಬಾಬಾ ರಾಮದೇವ್‌ ಹೇಳಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅಯೋಧ್ಯೆ ವಿಚಾರದ ಬಗ್ಗೆ ಮಾತನಾಡುವ ವೇಳೆ ಹೀಗೆ ಹೇಳಿದ್ದಾರೆ. “ಹೇಗೆ ವ್ಯಾಟಿಕನ್‌ ಸಿಟಿಯು ಕ್ರೈಸ್ತರಿಗೆ, ಮೆಕ್ಕಾ ಮುಸ್ಲಿಮರಿಗೆ, ಸ್ವರ್ಣ ಮಂದಿರ ಸಿಖVರಿಗೆ ಮೀಸ ಲಾಗಿದೆಯೋ, ಹಾಗೆಯೇ ಅಯೋ ಧ್ಯೆಯು ಹಿಂದೂಗಳಿಗೆ ಮೀಸಲಾಗಿದೆ. ಅಲ್ಲಿ ಕಟ್ಟುವ ರಾಮ ಮಂದಿರ ಅತ್ಯಂತ ಸುಂದರ ವಾಗಿರಬೇಕು’ ಎಂದಿದ್ದಾರೆ. “ತೀರ್ಪು ಬಂದ ಅನಂತರ ಪರಿಸ್ಥಿತಿ ಶಾಂತವಾಗಿರುವುದು ಕಾನೂನು ಸುವ್ಯವಸ್ಥಿತ ವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಮಂದಿರ ಕಟ್ಟಲು ಮುಸ್ಲಿಮರು ನೆರವಾಗಬೇಕು. ಮಸೀದಿ ಕಟ್ಟಲು ಹಿಂದೂ ಗಳು ನೆರವಾಗಬೇಕು. ರಾಮಜನ್ಮಭೂಮಿ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ರಾಷ್ಟ್ರದ ಏಕತೆಗೆ ಪೂರಕವಾಗಿದೆ’ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ