Dowry Demand: ವರದಕ್ಷಿಣೆ ಬೇಡಿಕೆಯಿಟ್ಟು ಪತ್ನಿಯನ್ನು ಬಾವಿಯಲ್ಲಿ ನೇತು ಹಾಕಿದ ಪತಿ.!
Team Udayavani, Sep 6, 2023, 11:39 AM IST
ಭೋಪಾಲ್: ಪತಿಯೊಬ್ಬ ಪತ್ನಿಯನ್ನು ಬಾವಿಯಲ್ಲಿ ನೇತು ಹಾಕಿ ವರದಕ್ಷಿಣೆಗೆ ಬೇಡಿಕೆಯಿಟ್ಟ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಆಗಸ್ಟ್ 20 ರಂದು ಮಧ್ಯ ಪ್ರದೇಶದ ನೀಮಚ್ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಾಕೇಶ್ ಕಿರ್ ಎಂಬ ವ್ಯಕ್ತಿ ಪತ್ನಿಯಲ್ಲಿ ವರದಕ್ಷಿಣೆಗಾಗಿ ಬೇಡಿಕೆಯಿಟ್ಟು ಈ ಕೃತ್ಯವೆಸಗಿದ್ದಾನೆ. ಪತ್ನಿ ಉಷಾಳನ್ನು ಬಾವಿಯಲ್ಲಿ ನೇತು ಹಾಕಿ, ಅದನ್ನು ಚಿತ್ರೀಕರಿಸಿ ಪತ್ನಿ ಮನೆಯವರಿಗೆ ಕಳುಹಿಸಿದ್ದಾನೆ.
ಇದನ್ನೂ ಓದಿ: FIR: ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಸ್ಟಾಲಿನ್, ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್ಐಆರ್
5 ಲಕ್ಷ ರೂ. ವರದಕ್ಷಿಣೆಯಾಗಿ ನೀಡಬೇಕೆಂದು ಬೇಡಿಯಿಟ್ಟಿದ್ದಾನೆ. ಉಷಾಳ ಮನೆಯವರು ವಿಡಿಯೋ ನೋಡಿ ಅದೇ ಗ್ರಾಮದ ಕೆಲವರಿಗೆ ಹೇಳಿ ಮಗಳನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗಿದ್ದು, ಪೊಲೀಸರು ಆ ಬಳಿಕ ರಾಕೇಶ್ ನನ್ನು ಬಂಧಿಸಿದ್ದಾರೆ.
ಆರೋಪಿ 5 ಲಕ್ಷ ರೂಪಾಯಿ ವರದಕ್ಷಿಣೆಗಾಗಿ ಈ ಕೃತ್ಯವನ್ನುವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ