ಮಧ್ಯಪ್ರದೇಶ: ಸೈಕೋಪಾತ್ ಕಿಲ್ಲರ್ ಎನ್ ಕೌಂಟರ್ ಗೆ ಬಲಿ, ಐವರು ಪೊಲೀಸರಿಗೆ ಗಾಯ
ಈತನ ವಿರುದ್ಧ ಹಲವಾರು ರಾಜ್ಯಗಳಲ್ಲಿ ಆರು ಕೊಲೆ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
Team Udayavani, Dec 4, 2020, 10:46 AM IST
ಭೋಪಾಲ್: ಸೈಕೋಪಾತ್ ಕಿಲ್ಲರ್ ಎನ್ ಕೌಂಟರ್ ಗೆ ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ನಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಐವರು ಪೊಲೀಸರು ಗಾಯಗೊಂಡಿದ್ದಾರೆ.
ಸೈಕೋಪಾತ್ ಕಿಲ್ಲರ್ ಆರೋಪಿ ಗುಜರಾತ್ ನ ದಾಹೋದ್ ನಿವಾಸಿ ದಿಲೀಪ್ ದೇವಾಲ್ ಎನ್ ಕೌಂಟರ್ ಗೆ ಬಲಿಯಾಗಿದ್ದು, ಈತನ ವಿರುದ್ಧ ಹಲವಾರು ರಾಜ್ಯಗಳಲ್ಲಿ ಆರು ಕೊಲೆ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ರತ್ಲಾಮ್ ನಲ್ಲಿ ನವೆಂಬರ್ 25ರಂದು ಚೋಟಿ ದೀಪಾವಳಿ ಆಚರಣೆಯ ಸಂಭ್ರಮದಲ್ಲಿ ಜನರು ಪಾಲ್ಗೊಂಡಿದ್ದ ವೇಳೆ ಇದೇ ಅವಕಾಶ ಬಳಸಿಕೊಂಡಿದ್ದ ನಟೋರಿಯಸ್ ಕಿಲ್ಲರ್ ದೇವಾಲ್, ಮನೆಯೊಂದಕ್ಕೆ ನುಗ್ಗಿ ಮೂವರನ್ನು (ಪತಿ, ಪತ್ನಿ ಮತ್ತು ಮಗಳು) ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರ ನೀಡಿದ್ದಾರೆ.
ಅಂದು ರಾತ್ರಿ ದೀಪಾವಳಿ ಪಟಾಕಿ ಶಬ್ದದ ಸಂದರ್ಭವನ್ನು ಉಪಯೋಗಿಸಿಕೊಂಡು ದೇವಾಲ್ ಮತ್ತು ಆತನ ಸಹಚರರು ವ್ಯವಸ್ಥಿತವಾಗಿ ದಾಳಿ ನಡೆಸಿದ್ದರು. ಅಷ್ಟೇ ಅಲ್ಲ ಜೂನ್ ತಿಂಗಳಿನಲ್ಲಿ ದೇವಾಲ್ ಮಹಿಳೆಯೊಬ್ಬರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವುದಾಗಿಯೂ ವರದಿ ತಿಳಿಸಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಮುಸಲ್ಮಾನ್ ಗೂಂಡಾಗಿರಿ ನಡೆಯಲ್ಲ: ಈಶ್ವರಪ್ಪ ಕೆಂಡಾಮಂಡಲ
ರತ್ಲಾಮ್ ನಲ್ಲಿ ಸಲೂನ್ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ತನಗೆ ಸೇರಿದ್ದ ಜಾಗವನ್ನು ಮಾರಾಟ ಮಾಡಿದ್ದು, ಆ ಹಣವನ್ನು ಮನೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ಕಿಲ್ಲರ್ ದೇವಾಲ್ ಮಾಹಿತಿ ಪಡೆದುಕೊಂಡು ಕುಟುಂಬದ ಮೂವರನ್ನು ಗುಂಡಿಕ್ಕಿ ಹತ್ಯೆಗೈದು ಹಣ ದೋಚಿ ಪರಾರಿಯಾಗಿದ್ದ ಎಂದು ವರದಿ ಹೇಳಿದೆ.
ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಆರೋಪಿಗಳಾದ ಅನುರಾಗ್ ಮೇಹಾರ್ (25ವರ್ಷ), ಗೌರವ್ ಬಿಲ್ವಾಲ್ (22ವರ್ಷ) ಮತ್ತು ಲಾಲಾ ಭಾಬೋರ್ (20ವರ್ಷ) ನನ್ನು ಬಂಧಿಸಲಾಗಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಫೇಲ್ ವಿರಾಟ ರೂಪ, ವೈವಿಧ್ಯತೆಯ ವೈಭವ : ಗಣರಾಜ್ಯ ಪರೇಡ್ ನಲ್ಲಿ ರಕ್ಷಣಾಪಡೆಗಳ ಬಲಪ್ರದರ್ಶನ
ರೈತರು ಕಾನೂನು ಬಾಹೀರವಾಗಿ ನಡೆದುಕೊಂಡಿರುವುದು “ಅತ್ಯಂತ ದುರದೃಷ್ಟಕರ”: ಶಶಿ ತರೂರ್
ದೆಹಲಿಯಲ್ಲಿ ಹೆಚ್ಚುವರಿ ಅರೆಸೇನಾಪಡೆ ನಿಯೋಜನೆ, ಉನ್ನತ ಮಟ್ಟದ ಸಭೆ; ಇಂಟರ್ನೆಟ್ ಸ್ಥಗಿತ
ರೈತರ ಹೆಸರಿನಲ್ಲಿ ಗಲಭೆ ಮಾಡಿದ್ದು ಯಾರೆಂದು ಗೊತ್ತಿದೆ: ಭಾರತೀಯ ಕಿಸಾನ್ ಸಂಘ
ದೆಹಲಿ: ಹಿಂಸಾರೂಪಕ್ಕೆ ತಿರುಗಿದ ರೈತರ ಪ್ರತಿಭಟನೆ; ಟ್ರ್ಯಾಕ್ಟರ್ ಮಗುಚಿ ಬಿದ್ದು ರೈತ ಸಾವು