ಥಾಣೆ: ಪೊಲೀಸರ ಸೋಗಿನಲ್ಲಿ ವೈದ್ಯರ ಸುಲಿಗೆ ಯತ್ನ; ಐವರು ಅರೆಸ್ಟ್
Team Udayavani, Aug 25, 2018, 4:13 PM IST
ಥಾಣೆ : ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ವೈದ್ಯರೊಬ್ಬರಿಂದ 2 ಲಕ್ಷ ರೂ. ಕೀಳಲು ಯತ್ನಿಸಿದ ಇಬ್ಬರು ಮಹಿಳೆಯರ ಸಹಿತ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬ್ರಾದಲ್ಲಿನ ಡಾ. ನದೀಂ ಬೇಗ್ ಅವರ ಕ್ಲಿನಿಕ್ಗೆ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ತೆರಳಿದ ಈ ಐವರು ಆರೋಪಿಗಳು ಅಲ್ಲಿ ಗರ್ಭಪಾತದ ಎಂಟಿಪಿ ಕಿಟ್ ಇರುವುದನ್ನು ಕಂಡು ತಾವು ಕೇಸ್ ಹಾಕುವುದಾಗಿಯೂ ಇಲ್ಲದಿದ್ದರೆ ತಮಗೆ 2 ಲಕ್ಷ ರೂ. ಕೊಡಬೇಕೆಂದೂ ತಾಕೀತು ಮಾಡಿದ್ದರು.
ಕೊನೆಗೆ 1.50 ಲಕ್ಷ ರೂ. ಕೊಡಲು ಒಪ್ಪಿದ ವೈದ್ಯ ಬೇಗ್ ಅವರು ರೆಸ್ಟೋರೆಂಟ್ ಒಂದರಲ್ಲಿ ಈ ಹಣ ಕೊಡುವುದಾಗಿ ಹೇಳಿ ಅಲ್ಲಿಗೆ ಬರುವಂತೆ ಆರೋಪಿಗಳಿಗೆ ಹೇಳಿದರು. ರೆಸ್ಟೋರೆಂಟ್ನಲ್ಲಿದ್ದ ತಮ್ಮ ಸಹೋದ್ಯೋಗಿ ವೈದ್ಯರನ್ನು ಜಾಗೃತ ಗೊಳಿಸಿದ ವೈದ್ಯ ನದೀಂ ಬೇಗ್ ಅವರು ಉಪಾಯದಿಂದ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಬಂಧಿತರನ್ನು ಸಂದೀಪ್ ಕಾಂಬ್ಳಿ (32), ಅಶೋಕ್ ಶಿರವಾಡೆ (30), ಶೈಲೇಶ್ ಯಾದವ್ (31), ಅನಿತಾ ಥಾಪಾ (40) ಮತ್ತು ಸವಿತಾ ಜಾಧವ್ (30) ಎಂದು ಗುರುತಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್