ಪಾಲ್ಘರ್ನಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆ; ಸಾವು ನೋವು ಇಲ್ಲ
Team Udayavani, Jul 11, 2019, 11:34 AM IST
ಪಾಲ್ಘರ್ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮವಾಗಿ ಸೇತುವೆಯೊಂದರ ದೊಡ್ಡ ಭಾಗ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಆದರೆ ಈ ದುರಂತದಲ್ಲಿ ಯಾವುದೇ ಸಾವು, ನೋವು ಆಗಿರುವ ವರದಿ ಇಲ್ಲ ಎಂದು ಜಿಲ್ಲಾ ವಿಕೋಪ ನಿರ್ವಹಣ ವಿಭಾಗದ ಮುಖ್ಯಸ್ಥ ವಿವೇಕಾನಂದ ಕದಂ ತಿಳಿಸಿದ್ದಾರೆ.
ಪಾಲ್ಘರ್ನ ಮೊಖಾಡ ತಾಲೂಕಿನ ಮೋರ್ಚುಂಡಿ ಗ್ರಾಮದಲ್ಲಿನ ಸಣ್ಣ ನದಿಯೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಈ ಸೇತುವೆ ಈ ಭಾಗದ ಪ್ರಮುಖ ಸಂಪರ್ಕ ಸೇತುವಾಗಿದೆ.