ಕೋರ್ಟ್ ಮಾರ್ಷಲ್- ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರ್ಮಿಯ ಮೇಜರ್ ಜನರಲ್ ವಜಾ
Team Udayavani, Aug 16, 2019, 6:17 PM IST
ನವದೆಹಲಿ:ಲೈಂಗಿಕ ಕಿರುಕುಳ ಆರೋಪದ ಸಾಬೀತಾದ ಹಿನ್ನೆಲೆಯಲ್ಲಿ ಅಸ್ಸಾಂ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮೇಜರ್ ಜನರಲ್ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದಾಗಿ ಆರ್ಮಿ ಮುಖ್ಯಸ್ಥ ಬಿಪಿನ್ ರಾವತ್ ಶುಕ್ರವಾರ ತಿಳಿಸಿದ್ದಾರೆ.
ಮೇಜರ್ ಜನರಲ್ ಆರ್ ಎಸ್ ಜಸ್ವಾಲ್ ವಿರುದ್ಧ ಕೋರ್ಟ್ ಮಾರ್ಷಲ್ ಮುಕ್ತಾಯಗೊಂಡಿದ್ದು, ದೋಷಿ ಎಂದು ತೀರ್ಪು ಬಂದ ಹಿನ್ನೆಲೆಯಲ್ಲಿ ಅಧಿಕಾರದಿಂದ ವಜಾಗೊಳಿಸುವ ಆದೇಶಕ್ಕೆ ಜುಲೈ ತಿಂಗಳಿನಿಂದಲೇ ಜಾರಿಗೆ ಬರುವಂತೆ ಆರ್ಮಿ ಮುಖ್ಯಸ್ಥ ಬಿಪಿನ್ ಅವರು ಸಹಿ ಹಾಕಿರುವುದಾಗಿ ವರದಿ ತಿಳಿಸಿದೆ.
ಆರೋಪ ಸಾಬೀತಾದ ನಿಟ್ಟಿನಲ್ಲಿ ಮೇಜರ್ ಜನರಲ್ ಅವರನ್ನು ವಜಾಗೊಳಿಸುವಂತೆ ಆರ್ಮಿ ಜನರಲ್ ಕೋರ್ಟ್ ಮಾರ್ಷಲ್ ಕಳೆದ ಡಿಸೆಂಬರ್ ನಲ್ಲಿಯೇ ಶಿಫಾರಸು ಮಾಡಿತ್ತು ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೊಬೈಲ್ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ:ಏನಿದು ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್
ಊಟದ ತಟ್ಟೆ ವಿಚಾರ: ಮದುವೆ ಸಮಾರಂಭದಲ್ಲೇ ವ್ಯಕ್ತಿಯ ಕೊಲೆಗೈದ ಮ್ಯೂಸಿಕ್ ಬ್ಯಾಂಡ್ ಸಿಬ್ಬಂದಿ
ಒಂದು ವೇಳೆ ಕಾಂಗ್ರೆಸ್, ಸಿಪಿಐಎಂ ಅಧಿಕಾರದಲ್ಲಿದ್ದಿದ್ದರೆ…ತ್ರಿಪುರಾದಲ್ಲಿ ಸಿಎಂ ಯೋಗಿ …
ಕೇಂದ್ರದಿಂದ ಕರ್ನಾಟಕಕ್ಕೆ ʻಹೆದ್ದಾರಿʼ ಭಾಗ್ಯ
ಜಮ್ಮು-ಕಾಶ್ಮೀರದಲ್ಲಿ ಚಿತ್ರಮಂದಿರಗಳು ಹೌಸ್ ಫುಲ್ ಆಗ್ತಿದೆ…ಕಾಂಗ್ರೆಸ್ ಗೆ ಮೋದಿ ತಿರುಗೇಟು