ಹೆಂಡತಿಗೆ ಇಷ್ಟವಿಲ್ಲದೆ ನಡೆಸುವ ಲೈಂಗಿಕ ಕ್ರಿಯೆ ಕೂಡ ಅತ್ಯಾಚಾರ : ಕೇರಳ ಹೈಕೋರ್ಟ್
Team Udayavani, Aug 7, 2021, 7:58 AM IST
ನವದೆಹಲಿ : ಮದುವೆಯಾದ ಮೇಲೆ ಹೆಂಡತಿ ತನ್ನ ಸ್ವತ್ತು ಅವಳನ್ನು ಏನು ಬೇಕಾದರೂ ಮಾಡಬಹುದು ಎನ್ನುವ ಗಂಡಸರಿಗೆ ಕೇರಳ ಕೈಕೋರ್ಟ್ ಚಾಟಿ ಬೀಸಿದೆ. ತಾನು ಮದುವೆಯಾದ ಹೆಂಡತಿಗೆ ಇಷ್ಟವಿಲ್ಲದೆ ಲೈಂಗಿಕ ಕ್ರಿಯೆ ನಡೆಸಿದರೆ ಅದು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಎಂದು ಕೇರಳ ಹೈಕೋರ್ಟ್ ಆದೇಶ ಹೊರಡಿಸಿದೆ. ಮದುವೆಯ ವೇಳೆ ಗಂಡ ಮತ್ತು ಹೆಂಡತಿ ಇಬ್ಬರೂ ಸಮಾನರು ಎಂದು ಪರಿಗಣಿಸಲಾಗುತ್ತದೆ.
ತನ್ನ ಹೆಂಡತಿಗಿಂತ ತಾನೇ ಶ್ರೇಷ್ಠ ಎಂದು ಭಾವಿಸಿ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಬಾರದು. ಇನ್ನು ಆಕೆಯ ದೇಹವಾಗಿರಬಹುದು ಅಥವಾ ವೈಯಕ್ತಿಕ ಸ್ಥಾನಮಾನದಲ್ಲೂ ಇಬ್ಬರೂ ಸಮಾನರಾಗಿರುತ್ತಾರೆ ಎಂದು ಪೀಠವು ಹೇಳಿದೆ.
ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಾಲಯವು, ವೈವಾಹಿಕ ಅತ್ಯಾಚಾರವು ವಿಚ್ಛೇದನ ಪಡೆದುಕೊಳ್ಳಲು ಪ್ರಮುಖ ಅಂಶವಾಗಿದೆ ಎಂದು ತಿಳಿಸಿದೆ.