ನೋಯ್ಡಾ ವಿದ್ಯಾರ್ಥಿನಿ ಮೇಲೆ ರೇಪ್ ನಡೆದ ಕುರುಹಿಲ್ಲ: ಪೆಥಾಲಜಿ ವರದಿ
Team Udayavani, Apr 25, 2018, 11:59 AM IST
ಗ್ರೇಟರ್ ನೋಯ್ಡಾ : ತನ್ನ ಶಾಲಾ ಸ್ನೇಹಿತ ಮತ್ತು ತನ್ನ ಇಬ್ಬರು ಸಂಬಂಧಿಕರು ತನ್ನನ್ನು ಎ.18ರಂದು ಕಾರಿನಲ್ಲಿ ಅತ್ಯಾಚಾರ ಮಾಡಿದ್ದರು ಎಂದು ದೂರು ನೀಡಿದ್ದ ಗ್ರೇಟರ್ ನೋಯ್ಡಾ ದ 11ನೇ ತರಗತಿಯ ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದೀಗ ಬಂದಿರುವ ಮೆಡಿಕಲ್ ಮತ್ತು ಪೆಥಾಲಜಿ ವರದಿಗಳು ಆಕೆಯ ಮೇಲೆ ರೇಪ್ ನಡೆದಿರುವ ಯಾವುದೇ ಕುರುಹುಗಳು ಕಂಡು ಬರುತ್ತಿಲ್ಲ ಎಂದು ಹೇಳಿವೆ.
ಹುಡುಗಿಯ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ನೀಡಿದ್ದ ದೂರಿನಲ್ಲಿ ಹೆಸರಿಸಿದ್ದ ಮೂವರೂ ಆರೋಪಿಗಳೂ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಅವರಿಗಾಗಿ ಈಗಲೂ ಶೋಧ ಕಾರ್ಯದಲ್ಲಿದ್ದಾರೆ.
ಹುಡುಗಿಯು ಹೇಳಿರುವ ಪ್ರಕಾರ ಆಕೆಯು ಶಾಲೆ ಮುಗಿಸಿ ಮರಳುವಾಗ ಆರೋಪಿಗಳು ಆಕೆಯನ್ನು ಅಪಹರಿಸಿದ್ದಾರೆ. ಬಳಿಕ ಕಾರಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಹುಡುಗಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಗ್ರೇಟರ್ ನೋಯ್ಡಾದ ಗಾಲ್ತಿಯಾ ಕಾಲೇಜ್ ಸಮೀಪ ಬಿದ್ದುಕೊಂಡಿದ್ದುದು ಪತ್ತೆಯಾಗಿತ್ತು.
ಮೆಡಿಕಲ್ ಮತ್ತು ಪೆಥಾಲಜಿ ವರದಿಗಳು ಹುಡುಗಿಯ ಮೇಲೆ ರೇಪ್ ನಡೆದಿರುವ ಕುರುಹುಗಳು ಕಂಡು ಬಂದಿಲ್ಲ ಎಂದು ಹೇಳಿರುವುದನ್ನು ಅನುಸರಿಸಿ ಪೊಲೀಸರು ಈಗ ಈ ರೇಪ್ ಕಥೆಯ ಸತ್ಯಾಸತ್ಯತೆಯನ್ನು ಹೊರತರಲು ಶ್ರಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ
ಭದ್ರತಾಲೋಪ? ತಮಿಳುನಾಡಿನಲ್ಲಿ ಬಿಜೆಪಿ ಮುಖಂಡನ ಹತ್ಯೆ, ಎಐಡಿಎಂಕೆ ಆಕ್ರೋಶ
ಮತ್ತೊಂದು ಶಾಕ್: ಹಿರಿಯ ನಾಯಕ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ಗುಡ್ ಬೈ, ಎಸ್ಪಿ ಬೆಂಬಲ
ಮತ್ತೆ ಪ್ರಧಾನಿ ಮೋದಿ ಭೇಟಿ ತಪ್ಪಿಸಿಕೊಂಡ ತೆಲಂಗಾಣ ಸಿಎಂ ಕೆಸಿಆರ್
IPL ಬೆಟ್ಟಿಂಗ್: ಠೇವಣಿದಾರರ ಹಣ ಬಳಸಿ 1 ಕೋಟಿ ರೂ. ಕಳೆದುಕೊಂಡ ಪೋಸ್ಟ್ ಮಾಸ್ಟರ್, ಬಂಧನ!