ಕಾಂಗ್ರೆಸ್ ಗೆ ಆಘಾತ: ಮಾಜಿ ಸಿಎಂ ಸೇರಿ 11 ಮಂದಿ ಶಾಸಕರು ಟಿಎಂಸಿ ಸೇರ್ಪಡೆ!
Team Udayavani, Nov 25, 2021, 8:41 AM IST
ಶಿಲ್ಲಾಂಗ್: ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಮತ್ತು 11 ಮಂದಿ ಶಾಸಕರು ಮೇಘಾಲಯದಲ್ಲಿ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದು, ಕಾಂಗ್ರೆಸ್‌ಗೆ ಭಾರೀ ಆಘಾತವಾಗಿದೆ. ಈ ನಡೆಯೊಂದಿಗೆ 17 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ತೃಣಮೂಲಕ್ಕೆ ಸೇರ್ಪಡೆಯಾಗಿದ್ದಾರೆ.
ರಾಹುಲ್ ಗಾಂಧಿ ಅವರು ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿನ್ಸೆಂಟ್ ಎಚ್ ಪಾಲಾ ಅವರನ್ನು ತಮ್ಮ ಬೇಡಿಕೆಗಳ ಕುರಿತು ಭೇಟಿಯಾದ ಒಂದು ತಿಂಗಳ ನಂತರ ಈ ಪ್ರಸಂಗ ನಡೆದಿದೆ.
ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ವಿನ್ಸೆಂಟ್ ಹೆಚ್ ಪಾಲಾ ಅವರು ಮೇಘಾಲಯ ಘಟಕದ ಹೊಸ ಮುಖ್ಯಸ್ಥರಾಗಿ ನೇಮಕಗೊಂಡಾಗಿನಿಂದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮುಕುಲ್ ಎಂ ಸಂಗ್ಮಾ ನಡುವೆ ಬಿರುಕು ಮೂಡಿತ್ತು.
ಇದನ್ನೂ ಓದಿ:ಇನ್ನೆರಡು ಬ್ಯಾಂಕ್ ಖಾಸಗಿಗೆ? ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ
ಪಾಲಾ ಅವರ ನೇಮಕದ ಬಗ್ಗೆ ಪಕ್ಷದ ನಾಯಕತ್ವವು ತನ್ನನ್ನು ಸಂಪರ್ಕಿಸಿಲ್ಲ ಎಂದು ಸಂಗ್ಮಾ ಹೇಳಿದ್ದರು. ಸಂಗ್ಮಾ ತೃಣಮೂಲ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಬಹುದು ಎಂಬ ಊಹಾಪೋಹವಿತ್ತು. ಆದಾಗ್ಯೂ, ಉಭಯ ನಾಯಕರು ಶನಿವಾರ ಒಟ್ಟಿಗೆ ಬಂದು ಮುಂಬರುವ ಉಪಚುನಾವಣೆಗೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದರು.
ಟಿಎಂಸಿ ಪರವಾಗಿ ಪ್ರಶಾಂತ್ ಕಿಶೋರ್ ಅವರ ತಂಡದ ಸದಸ್ಯರು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ
ಭದ್ರತಾಲೋಪ? ತಮಿಳುನಾಡಿನಲ್ಲಿ ಬಿಜೆಪಿ ಮುಖಂಡನ ಹತ್ಯೆ, ಎಐಡಿಎಂಕೆ ಆಕ್ರೋಶ
ಮತ್ತೊಂದು ಶಾಕ್: ಹಿರಿಯ ನಾಯಕ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ಗುಡ್ ಬೈ, ಎಸ್ಪಿ ಬೆಂಬಲ
ಮತ್ತೆ ಪ್ರಧಾನಿ ಮೋದಿ ಭೇಟಿ ತಪ್ಪಿಸಿಕೊಂಡ ತೆಲಂಗಾಣ ಸಿಎಂ ಕೆಸಿಆರ್
IPL ಬೆಟ್ಟಿಂಗ್: ಠೇವಣಿದಾರರ ಹಣ ಬಳಸಿ 1 ಕೋಟಿ ರೂ. ಕಳೆದುಕೊಂಡ ಪೋಸ್ಟ್ ಮಾಸ್ಟರ್, ಬಂಧನ!