ಶಂಕಾಸ್ಪದ ಮತಗಟ್ಟೆ ಸಮೀಕ್ಷೆ, ಇವಿಎಂ ಹ್ಯಾಕ್‌, ಮತ್ತೂಂದು ಬಾಲಕೋಟ್‌: ಮೆಹಬೂಬ ಮುಫ್ತಿ

Team Udayavani, May 21, 2019, 3:31 PM IST

ಹೊಸದಿಲ್ಲಿ : ಕೇಂದ್ರದಲ್ಲಿ ಎನ್‌ಡಿಎ ಪುನಃ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿರುವ ಮತಗಟ್ಟೆ ಸಮೀಕ್ಷೆಗಳು ‘ಶಂಕಾಸ್ಪದ’ವಾಗಿವೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಆರೋಪಿಸಿದ್ದಾರೆ.

‘ಶಂಕಾಸ್ಪದ ಮತಗಟ್ಟೆ ಸಮೀಕ್ಷೆಯೊಂದಿಗೆ ಇವಿಎಂ ಹ್ಯಾಕಿಂಗ್‌ ಸೇರಿಕೊಂಡು ಮತ್ತೂಂದು ಬಾಲಾಕೋಟ್‌ ಸೃಷ್ಟಿಯಾಗುತ್ತಿದೆ’ ಎಂದು ಟ್ವೀಟ್‌ ಮಾಡಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ‘ಮತ ಚಲಾವಣೆಯ ವೇಳೆ ಇವಿಎಂ ಗಳನ್ನು ಸ್ವಿಚ್‌ ಆಫ್ ಮಾಡಿಡಲಾಗಿತ್ತು ಎಂಬ ಬಗೆಗಿನ ಸಾಕ್ಷ್ಯ ಕುರಿತಾದ ಚುನಾವಣಾ ಆಯೋಗದ ನಿಲುವನ್ನು’ ಪ್ರಶ್ನಿಸಿದರು.

“ಮತ ಚಲಾವಣೆ ವೇಳೆ ಇವಿಎಂ ಗಳನ್ನು ಸ್ವಿಚ್‌ ಆಫ್ ಮಾಡಲಾಗಿತ್ತು ಎಂಬ ಬಗ್ಗೆ ಬಲವಾದ ಸಾಕ್ಷ್ಯವಿದ್ದರೂ ಚು.ಆಯೋಗ ಆ ಬಗ್ಗೆ ಯಾವುದೇ ಕಳವಳ ವ್ಯಕ್ತಪಡಿಸಿಲ್ಲ. ಶಂಕಾಸ್ಪದ ಮತಗಟ್ಟೆ ಸಮೀಕ್ಷೆಗಳ ಹಿಂದೆ ಸುಳ್ಳು ಅಲೆ ಇರುವುದು ಮತ್ತು ಇವಿಎಂ ಗಳಲ್ಲಿ ಕೈಚಳಕ ತೋರಿಸಲಾಗಿರುವುದನ್ನು ಕಂಡರೆ ಇನ್ನೊಂದು ಬಾಲಾಕೋಟ್‌ ಸೃಷ್ಟಿಯಾಗುತ್ತಿದೆ ಎಂದು ಅನ್ನಿಸುತ್ತಿದೆ” ಮೆಹಬೂಬ ಮುಫ್ತಿ ಟ್ವೀಟ್‌ ಮಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ