ಇದೋ ಬಂದಿದೆ ಮೋದಿ ಮಾಸ್ಕ್! ಪ್ರಧಾನಿ ಭಾವಚಿತ್ರವಿರುವ ಮಾಸ್ಕ್ ಗೆ ಭಾರೀ ಬೇಡಿಕೆ
ಮಧ್ಯಪ್ರದೇಶದಲ್ಲಿ ಮುಖಗವಸುಗಳ ಹೊಸ ಟ್ರೆಂಡ್
Team Udayavani, Jun 17, 2020, 11:00 AM IST
ಭೋಪಾಲ್: ಮಧ್ಯಪ್ರದೇಶದಲ್ಲಿ ಬಟ್ಟೆ ವ್ಯಾಪಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಭಾವ ಚಿತ್ರ ಇರುವ ಮಾಸ್ಕ್ ಅನ್ನು ಮಾರುಕಟ್ಟೆಗೆ ತಂದಿದ್ದಾರೆ. ಕೋವಿಡ್ ದಿಂದ ರಕ್ಷಣೆ ಪಡೆಯಲೆಂದು ಬಳಕೆಗೆ ಬಂದ ಮಾಸ್ಕ್ ಈಗ ಹಲವರ ಜೀವನ ನಿರ್ವಹಣೆಗೆ ದಾರಿಯಾಗಿದೆ. ತರಹೇವಾರಿ ಮಾಸ್ಕ್ ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಪ್ರಸ್ತುತ ಆ ಸಾಲಿಗೆ “ಮೋದಿ ಮಾಸ್ಕ್’ ಸೇರಿಕೊಂಡಿದೆ. ಇತ್ತೀಚೆಗೆ ಕೇರಳದ ಸ್ಟಾರ್ಟ್ಅಪ್ ಒಂದು ಅವರವರ ಮುಖವನ್ನೇ ಹೋಲುವ ಮಾಸ್ಕ್ಗಳನ್ನು ಸಿದ್ಧಪಡಿಸಿ ಸುದ್ದಿಯಾಗಿತ್ತು. ಈಗ ಮಧ್ಯಪ್ರದೇಶ ಅಂತಹ ಹೊಸತನ ಪರಿಚಯಿಸಿದೆ. ಭೋಪಾಲದ ಬಟ್ಟೆ ಅಂಗಡಿ ಒಂದರಲ್ಲಿ ಪ್ರಧಾನಿ ಮೋದಿ ಅವರ ಚಿತ್ರವನ್ನು ಪ್ರಿಂಟ್ ಮಾಡಿರುವ ಬಟ್ಟೆಯ ಮಾಸ್ಕ್ ಗಳು ದೊರೆಯುತ್ತಿವೆ.
ಅಂಗಡಿಗೆ ತರಿಸಿದ ಕೆಲವೇ ದಿನಗಳಲ್ಲಿ 1000 ಮೋದಿ ಮಾಸ್ಕ್ ಗಳು ಮಾರಾಟವಾಗಿವೆ. ಪ್ರಧಾನಿ ಮೋದಿ ಜೊತೆ, ರಾಹುಲ್ ಗಾಂಧಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಮಾಜಿ ಸಿಎಂ ಕಮಲ್ ನಾಥ್ ಅವರ ಭಾವಚಿತ್ರವಿರುವ ಮಾಸ್ಕ್ ಗಳು ಸಹ ನಮ್ಮ ಬಳಿ ಲಭ್ಯವಿವೆ. ಆದರೆ ಮೋದಿ ಮಾಸ್ಕ್ ಗಳಿಗೆ ಜನ ಆಕರ್ಷಿತರಾಗಿದ್ದು, ಭಾರೀ ಬೇಡಿಕೆ ಬರುತ್ತಿದೆ ಎಂದು ಅಂಗಡಿ ಮಾಲೀಕ ಕುನಾಲ್ ಪರಿಯಾನಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು