ವಿಮಾನ ಹೈಜಾಕ್ ಕುರಿತು ಮೊಬೈಲ್ ಸಂಭಾಷಣೆ… ವಿಮಾನ ಪ್ರಯಾಣಿಕ ಮುಂಬೈ ಪೊಲೀಸರ ವಶಕ್ಕೆ
Team Udayavani, Jun 23, 2023, 3:50 PM IST
ಮುಂಬಯಿ: ವಿಮಾನವನ್ನು ಹೈಜಾಕ್ ಮಾಡುವ ಕುರಿತು ಮೊಬೈಲ್ ಸಂಭಾಷಣೆ ನಡೆಸಿದ ಹಿನ್ನೆಲೆಯಲ್ಲಿ ವಿಸ್ತಾರ ವಿಮಾನದ ಪ್ರಯಾಣಿಕನೊಬ್ಬನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಪೊಲೀಸರ ವಶದಲ್ಲಿರುವ ವ್ಯಕ್ತಿಯನ್ನು ರಿತೇಶ್ ಸಂಜಯ್ ಕುಮಾರ್ ಜುನೇಜಾ ಎನ್ನಲಾಗಿದ್ದು ಈತ ವಿಸ್ತಾರ ವಿಮಾನದಲ್ಲಿ ಪ್ರಯಾಣ ನಡೆಸುತ್ತಿದ್ದ ವೇಳೆ ಫೋನ್ ಸಂಭಾಷಣೆ ನಡೆಸುತ್ತಿದ್ದು ಈ ವೇಳೆ ವ್ಯಕ್ತಿ ಹೈಜಾಕ್… ಹೈಜಾಕ್ ಎಂಬ ವಿಚಾರ ಮಾತನಾಡುತ್ತಿದ್ದ ಎಂದು ವಿಮಾನ ಸಿಬ್ಬಂದಿ ಕೇಳಿಸಿಕೊಂಡಿದ್ದಾರೆ ಇದರಿಂದ ಗಾಬರಿಗೊಂಡ ಸಿಬಂಧಿ ಕೂಡಲೇ ವಿಮಾನಯಾನ ಸಂಸ್ಥೆಗೆ ದೂರು ನೀಡಿದ್ದಾರೆ, ವಿಮಾನಯಾನ ಸಂಸ್ಥೆ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು ವಿಮಾನ ಮುಂಬೈ ತಲುಪುತ್ತಿದ್ದಂತೆ ರಿತೇಶ್ ನನ್ನ ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮುಂಬೈನ ಸಹಾರ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಜೀವನ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಅಪರಾಧ) ಮತ್ತು 505 (2) (ವದಂತಿಗಳನ್ನು ಹರಡುವುದು ಅಥವಾ ಆತಂಕಕಾರಿ ಸುದ್ದಿಗಳ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನಿಜವಾಗಲೂ ವ್ಯಕ್ತಿ ವಿಮಾನ ಹೈಜಾಕ್ ಮಾಡುವ ಉದ್ದೇಶದಿಂದಲೇ ಫೋನ್ ಸಂಭಾಷಣೆ ನಡೆಸಿದ್ದನಾ, ಅಥವಾ ಇನ್ನಾವುದೇ ವಿಚಾರಕ್ಕೆ ಸಂಬಂಧಿಸಿ ಹೈಜಾಕ್ ಪದ ಬಳಸಿದ್ದನೇ ಎಂಬುದು ತನಿಖೆ ಬಳಿಕ ಗೊತ್ತಾಗಬೇಕಿದೆ.
ಇದನ್ನೂ ಓದಿ: ಅಸ್ಸಾಂ ಭೀಕರ ಪ್ರವಾಹ: ಓರ್ವ ಮೃತ್ಯು, ಸಂಕಷ್ಟದಲ್ಲಿ 5 ಲಕ್ಷ ಮಂದಿ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ