ಮುಖ ಮುಚ್ಚುವ ವಸ್ತ ನಿಷೇಧಿಸಿದ ಕೇರಳ MES ಸಮೂಹದ ಅಧ್ಯಕ್ಷರಿಗೆ ಜೀವ ಬೆದರಿಕೆ ಕರೆ

Team Udayavani, May 4, 2019, 3:23 PM IST

ಕೋಯಿಕ್ಕೋಡ್‌, ಕೇರಳ : ಮುಖ ಮುಚ್ಚುವ ವಸ್ತ ಧರಿಸಿಕೊಂಡು ಶಾಲಾ ಕ್ಯಾಂಪಸ್‌ ಪ್ರವೇಶಿಸಕೂಡದು ಎಂಬ ಸುತ್ತೋಲೆ ಹೊರಡಿಸಿದ್ದ ಕೇರಳದ ಮುಸ್ಲಿಮ್‌ ಎಜುಕೇಶನಲ್‌ ಸೊಸೈಟಿ (ಎಂಇಎಸ್‌) ಇದರ ಅಧ್ಯಕ್ಷ ಪಿ ಎ ಫ‌ಜಲ್‌ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ಪೊಲೀಸರು ಇಂದು ಶನಿವಾರ ತಿಳಿಸಿದ್ದಾರೆ.

ಫ‌ಜಲ್‌ ಸ್ವೀಕರಿಸಿರುವ ಅಂತಾರಾಷ್ಟ್ರೀಯ ಫೋನ್‌ ಕರೆಯು ಬಹುತೇಕ ಗಲ್ಫ್ ರಾಷ್ಟ್ರದಿಂದ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಕರೆ ಮಾಡಿದ ಅಪರಿಚಿತ ವ್ಯಕ್ತಿಯು ‘ಮುಖ ಮುಚ್ಚುವ ವಸ್ತ ನಿಷೇಧದ ಆದೇಶ ಹಿಂಪಡೆಯಬೇಕು; ಇಲ್ಲದಿದ್ದರೆ ಕೊಲ್ಲಲಾಗುವುದು’ ಎಂದು ಹೇಳಿದ್ದು ಅತ್ಯಂತ ಕೆಟ್ಟ ಭಾಷೆಯಿಂದ ನಿಂದಿಸಿ ಬೈದಿರುವುದಾಗಿ ಫ‌ಜಲ್‌ ಹೇಳಿದ್ದಾರೆ.

ಕೋಯಿಕ್ಕೋಡ್‌ ಮೂಲದ ಪ್ರಗತಿಪರ ಶಿಕ್ಷಣ ಸಮೂಹ ಎಂಇಎಸ್‌  ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು ಇವುಗಳಲ್ಲಿ ಹಲವಾರು ಶಾಲೆಗಳು ಮತ್ತು ವೃತ್ತಿಪರ ಕಾಲೇಜುಗಳ ಇವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ