26 Rafale aircraft ನೌಕಾಪಡೆಗೂ ಸಿಗಲಿದೆ: ಡೀಲ್ಗೆ ಫ್ರಾನ್ಸ್ನ ಟೆಂಡರ್ ಪೂರ್ಣ
Team Udayavani, Dec 22, 2023, 6:15 AM IST
ಹೊಸದಿಲ್ಲಿ: ಭಾರತೀಯ ನೌಕಾಪಡೆಗೆ ಅಗತ್ಯವಾಗಿರುವ 26 ರಫೇಲ್ ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಬಗ್ಗೆ ಫ್ರಾನ್ಸ್ ಟೆಂಡರ್ ಪ್ರಕ್ರಿಯೆಯನ್ನು ಪೂರೈಸಿದೆ. ಅದರ ಒಟ್ಟು ಮೌಲ್ಯ 50 ಸಾವಿರ ಕೋಟಿ ರೂ. ಆಗಿದೆ. ಅಕ್ಟೋಬರ್ನಲ್ಲಿ ರಕ್ಷಣ ಸಚಿವಾಲಯ ಈ ವಿಮಾನಗಳ ಪೂರೈಕೆ ಸಂಬಂಧ ಫ್ರಾನ್ಸ್ನ ಡಸೋ ರಫೇಲ್ ಕಂಪೆನಿಗೆ ಆ ದೇಶದ ಸರ ಕಾ ರದ ಮೂಲಕ ಕೋರಿಕೆ ಸಲ್ಲಿಸಿತ್ತು. ಕೆಲವು ದಿನಗಳ ಹಿಂದೆ ಫ್ರಾನ್ಸ್, ಅದಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಕ್ರಿಯೆಗಳನ್ನು ರಕ್ಷಣ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದೆ.
ಭಾರತೀಯ ನೌಕಾಪಡೆಗಾಗಿ ಫ್ರಾನ್ಸ್ನಿಂದ 30 ಸಾವಿರ ಕೋಟಿ ರೂ. ಮೌಲ್ಯದ ಸ್ಕಾಪೇìನ್ ಸಬ್ಮರೀನ್ಗಳನ್ನು ಖರೀದಿ ಮಾಡುವುದರ ಬಗ್ಗೆ ರಕ್ಷಣ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣ ಖರೀದಿ ಸಮಿತಿ (ಡಿಎಸಿ) ಜೂ. 13ರಂದು ಸಮ್ಮತಿ ನೀಡಿತ್ತು. ಆ ವಹಿವಾಟಿಗಿಂತ ಹೊರತಾಗಿ 50 ಸಾವಿರ ಕೋಟಿ ರೂ. ಮೌಲ್ಯದ ನೌಕಾಪಡೆ ಆವೃತ್ತಿಯ ರಫೇಲ್ ಯುದ್ಧ ವಿಮಾನ ಖರೀದಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ