ನಿತೀಶ್ ಪ್ರಧಾನಿ ಹುದ್ದೆಗೆ ಪ್ರಬಲ ಅಭ್ಯರ್ಥಿಯಾಗಬಹುದು: ತೇಜಸ್ವಿ ಯಾದವ್
Team Udayavani, Aug 21, 2022, 6:53 PM IST
ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂಬ ಊಹಾಪೋಹದ ನಡುವೆಯೇ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಪ್ರತಿಪಕ್ಷಗಳು ಪರಿಗಣಿಸಿದರೆ, ಜೆಡಿಯು ನಾಯಕ “ಪ್ರಬಲ ಅಭ್ಯರ್ಥಿಯಾಗಬಹುದು” ಎಂದು ಭಾನುವಾರ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ,2024 ರ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಲು ಕುಮಾರ್ ಸೂಕ್ತರೇ ಮತ್ತು ಅವರು ವಿರೋಧ ಪಕ್ಷದ ಅಭ್ಯರ್ಥಿಯಾಗಬಹುದೇ ಎಂಬ ಪ್ರಶ್ನೆಗೆ ಯಾದವ್, “ನಾನು ಈ ಪ್ರಶ್ನೆಯನ್ನು ಗೌರವಾನ್ವಿತ ನಿತೀಶ್ ಜಿ ಅವರಿಗೆ ಬಿಡುತ್ತೇನೆ. ಆದರೆ ನಾನು ಇಡೀ ವಿರೋಧ ಪಕ್ಷದ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಪರಿಗಣಿಸಿದರೆ, ಗೌರವಾನ್ವಿತ ನಿತೀಶ್ ಜಿ ಖಂಡಿತವಾಗಿಯೂ ಪ್ರಬಲ ಅಭ್ಯರ್ಥಿಯಾಗಬಹುದು” ಎಂದರು.
ಬಿಹಾರದ ಉಪಮುಖ್ಯಮಂತ್ರಿ ಯಾದವ್ ಅವರು, ಮಹಾಘಟಬಂಧನ್ ಸರ್ಕಾರವು ಮರಳುವುದರೊಂದಿಗೆ “ಜಂಗಲ್ ರಾಜ್” ಮರಳಿ ಬರುತ್ತದೆ ಎಂಬ ಬಿಜೆಪಿಯ ನಿರೂಪಣೆಯ ವಿರುದ್ಧ ಆಕ್ರೋಶ ಹೊರ ಹಾಕಿ, “ದೇಶದ ಮುಂದಿರುವ ದೊಡ್ಡ ಸವಾಲನ್ನು, ಬಿಜೆಪಿಯ ಪ್ರಾಬಲ್ಯವನ್ನು ಬಹುತೇಕ ವಿರೋಧ ಪಕ್ಷಗಳು ಗುರುತಿಸುತ್ತವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್