ಪಿಂಚಣಿ ಪಡೆಯಲು ಆಧಾರ್‌ ಬೇಡ

Team Udayavani, May 16, 2018, 6:50 AM IST

ನವದೆಹಲಿ: ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಪಿಂಚಣಿ ಬೇಕಾಗಿದ್ದರೆ ಆಧಾರ್‌ ಕಡ್ಡಾಯ
ವೇನಲ್ಲ ಎಂದು ಕೇಂದ್ರ ಸಿಬ್ಬಂದಿ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ. 

ಪಿಂಚಣಿ ಪಡೆಯಲೋಸುಗ ಆಧಾರ್‌ ಕಡ್ಡಾಯ ಮಾಡಿಯೇ ಇಲ್ಲ ಎಂದು ಹೇಳಿರುವ ಅವರು ಕೇವಲ ವಯೋಮಿತಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಆಧಾರ್‌ ಅನ್ನು ತಾಂತ್ರಿಕವಾಗಿ ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗಾಗಿ ಮತ್ತು ಪಿಂಚಣಿದಾರರಿಗಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ