ಅಂತರ್ ರಾಷ್ಟ್ರೀಯ ಡ್ರಗ್ಸ್ ಜಾಲದ ನಂಟು: ಆರ್ಯನ್ ಖಾನ್ ವಿರುದ್ಧ ಪುರಾವೆಗಳಿಲ್ಲ; ಎನ್ಸಿಬಿ
Team Udayavani, Mar 2, 2022, 1:13 PM IST
ನವದೆಹಲಿ: ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಅಂತರ್ ರಾಷ್ಟ್ರೀಯ ಡ್ರಗ್ಸ್ ಜಾಲದೊಂದಿಗೆ ನಂಟು ಇರುವ ಕುರಿತು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ)ದ ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ.
ಆರ್ಯನ್ ಅಂತರರಾಷ್ಟ್ರೀಯ ಡ್ರಗ್ ಸಿಂಡಿಕೇಟ್ನ ಭಾಗವಾಗಿದ್ದರು ಎಂಬುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ಮೂಲಗಳು ತಿಳಿಸಿವೆ.
ಆದರೆ, ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಬಗ್ಗೆ ಮಾತನಾಡಲು ಅವರು ನಿರಾಕರಿಸಿದ್ದಾರೆ. ಗೋವಾ ಮೂಲದ ನೌಕೆಯ ಮೇಲೆ ನಡೆಸಿದ ದಾಳಿಯಲ್ಲಿ ಕೆಲವು ಅವ್ಯವಹಾರಗಳು ನಡೆದಿವೆ ಎಂದು ಮಾತ್ರ ಅವರು ಹೇಳಿದ್ದು, ಈ ಪ್ರಕರಣವನ್ನು ಇನ್ನೂ ಎಸ್ಐಟಿ ಪರಿಶೀಲಿಸುತ್ತಿದೆ.
ಮುಂಬಯಿ ವಲಯದ ಮುಖ್ಯಸ್ಥ ಸಮೀರ್ ವಾಂಖೆಡೆ ನೇತೃತ್ವದ ಎನ್ಸಿಬಿ ತಂಡವು ಅಕ್ಟೋಬರ್ 2 ಮತ್ತು 3 ರ ಮಧ್ಯರಾತ್ರಿ ಡ್ರಗ್ ಪಾರ್ಟಿ ನಡೆಯುತ್ತಿದ್ದ ವೇಳೆ ದಾಳಿ ನಡೆಸಿ, ಆರ್ಯನ್ ಖಾನ್ ಮತ್ತು ಇತರ ಕೆಲವರನ್ನು ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ತಂಡವು ಬಂಧಿಸಿತ್ತು.
ಇದನ್ನೂ ಓದಿ:ಪೇಟಿಯಂ ಮೂಲಕ ಹಣ ಬಂದಿದೆ ಎಂದು ವಂಚನೆ
ಅಕ್ಟೋಬರ್ 3 ರಂದು ಎನ್ಸಿಬಿ ತಂಡದಿಂದ ಆರ್ಯನ್ ಅವರನ್ನು ಬಂಧಿಸಲಾಯಿತು. ವಿಚಾರಣೆಯ ನಂತರ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಅವರ ಮೊದಲ ಜಾಮೀನನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ನಂತರ, ಖಾನ್ ತನ್ನ ವಕೀಲರ ಮೂಲಕ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು, ಅದು ಅಕ್ಟೋಬರ್ 28 ರಂದು ಅವರಿಗೆ ಜಾಮೀನು ನೀಡಿತ್ತು. ಕಾನೂನು ಪ್ರಕ್ರಿಯೆಗಳ ನಂತರ, ಅಕ್ಟೋಬರ್ 30 ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಇಲ್ಲಿಯವರೆಗೆ, ಇಬ್ಬರು ನೈಜೀರಿಯಾ ಪ್ರಜೆಗಳು ಸೇರಿದಂತೆ 20 ಜನರನ್ನು ಎನ್ಸಿಬಿ ಬಂಧಿಸಿದೆ.
ಎನ್ಸಿಬಿಯ ಎಸ್ಐಟಿ ಈ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಸಲಿದ್ದು, ಪ್ರಸ್ತುತ ಕಾನೂನು ಅಭಿಪ್ರಾಯವನ್ನು ಪಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ