Nighties,lungi ಧರಿಸಿ ಹೊರಕ್ಕೆ ಬರಬೇಡಿ; ನೋಯ್ಡಾದ ಅಪಾರ್ಟ್‌ಮೆಂಟ್ ಮಾಲಿಕರ ಸಂಘ ಮನವಿ
ತೀರಾ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ: ಕೆಲವರ ಆಕ್ಷೇಪ
Team Udayavani, Jun 15, 2023, 7:50 AM IST
ನೋಯ್ಡಾ: ಉತ್ತರಪ್ರದೇಶದ ನೋಯ್ಡಾ ನಗರದ ಹಿಮಸಾಗರ ಎಂಬ ಅಪಾರ್ಟ್‌ಮೆಂಟ್ ಮಾಲಿಕರ ಸಂಘವೊಂದು ಮಾಡಿದ ಮನವಿ ಭಾರೀ ಚರ್ಚೆಗೊಳಗಾಗಿದೆ.
ನಿವಾಸಿಗಳು ಎಲ್ಲರೂ ಒಗ್ಗೂಡುವ ಸ್ಥಳದಲ್ಲಿ, ಉದ್ಯಾನವನದಲ್ಲಿ ಉಡುಪುಗಳ ಬಗ್ಗೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದೆ.
ಮುಖ್ಯವಾಗಿ ಲುಂಗಿ ಉಟ್ಟುಕೊಂಡು, ನೈಟಿ ತೊಟ್ಟು ತಮ್ಮ ಫ್ಲ್ಯಾಟ್‌ಗಳಿಂದ ಹೊರಕ್ಕೆ ಹೋಗಬೇಡಿ ಎಂದು ಹೇಳಿದೆ. ಇದನ್ನು ಕೆಲವರು ಗೌರವದಿಂದ ಸ್ವೀಕರಿಸಿದ್ದರೂ, ಇನ್ನು ಕೆಲವರು ಆಕ್ರೋಶಗೊಂಡಿದ್ದಾರೆ. ಸಂಸ್ಥೆ ಜನರ ತೀರಾ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಸಿಟ್ಟಾಗಿದ್ದಾರೆ.
ಆದರೆ ಹಿಮಸಾಗರ ಅಪಾರ್ಟ್‌ಮೆಂಟ್ ಮಾಲಿಕರ ಸಂಘ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ನಾವು ಯಾರ ವಿರುದ್ಧವೂ ತಾರತಮ್ಯ ಮಾಡುತ್ತಿಲ್ಲ. ನಿವಾಸಿಗಳು ಕೆಲವು ನೀತಿಸಂಹಿತೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದೇವೆಷ್ಟೇ. ಕೆಲವರು ದೂರು ನೀಡಿದ್ದರಿಂದ ಹೀಗೆ ಮಾಡಬೇಕಾಯಿತು. ಕೆಲವು ದಿನಗಳ ಹಿಂದೆ ಮಹಿಳೆ , ಹಿರಿಯ ನಾಗರಿಕರೊಬ್ಬರು ಲುಂಗಿ ಉಟ್ಟುಕೊಂಡು ಯೋಗ ಮಾಡುತ್ತಿದ್ದರ ಬಗ್ಗೆ ಆಕ್ಷೇಪಿಸಿದ್ದರು. ಮೊದಲು ಮಾತಿನ ಮೂಲಕ ಸಂದೇಶ ನೀಡಿದ್ದೆವು. ನಂತರ ಈ ಬಗ್ಗೆ ಸುತ್ತೋಲೆ ಹೊರಡಿಸಬೇಕಾಯಿತು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ