ಪ್ರಿಯತಮೆಯ ಅಶ್ಲೀಲ ಫೋಟೋಗಳ ರವಾನೆ: ಪ್ರಿಯಕರನ ಬಂಧನ
Team Udayavani, Jul 14, 2017, 12:41 PM IST
ಮುಂಬಯಿ: ತನ್ನ ಪ್ರೇಯಸಿಯ ಅಶ್ಲೀಲ,ಆಕ್ಷೇಪಕಾರಿ ಫೋಟೋಗಳನ್ನು ಕ್ಲಿಕ್ಕಿಸಿದ್ದೇ ಅಲ್ಲದೆ ತನ್ನ ಸ್ನೇಹಿತರೊಡಗೂಡಿ ಈ ಫೋಟೋ ಗಳನ್ನು ವಾಟ್ಸಾಪ್ನಲ್ಲಿ ಇತರರಿಗೆ ರವಾನಿಸಿದ ಆರೋಪದ ಮೇಲೆ ಪೊಲೀಸರು ಸಂತ್ರಸ್ತ ಯುವತಿಯ ಪ್ರಿಯಕರ ರಾಕೇಶ್ ಸಿಂಗ್ನನ್ನು ಬಂಧಿಸಿದ್ದಾರೆ.
ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ರವಾನಿಸಲು ಆರೋಪಿ ರಾಕೇಶ್ ಸಿಂಗ್ಗೆ ಸಹಕರಿಸಿದ್ದ ಆತನ ಸ್ನೇಹಿತರಾದ ಅಖೀಲೇಶ್ ಸಿಂಗ್ ಮತ್ತು ಕುಶಾಲ್ ಯಾದವ್ ವಿರುದ್ಧವೂ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದು ಇವರೀರ್ವರು ಸದ್ಯ ತಲೆಮರೆಸಿಕೊಂಡಿದ್ದಾರೆ.
ಬಂಧಿತ ರಾಕೇಶ್ ಸಿಂಗ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಜು.14ರವರೆಗೆ ಈತನಿಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.