ಭಾರತದಲ್ಲಿ ಕೋಟ್ಯಧಿಪತಿ ತೆರಿಗೆದಾರರ ಸಂಖ್ಯೆ ಶೇ.60ರಷ್ಟು ಹೆಚ್ಚಳ

Team Udayavani, Oct 22, 2018, 6:28 PM IST

ನವದೆಹಲಿ:ವರ್ಷಕ್ಕೆ ಒಂದು ಕೋಟಿ ರೂಪಾಯಿಗಿಂತ ಅಧಿಕ ಆದಾಯವಿರುವ ತೆರಿಗೆದಾರರ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಶೇ.60ರಷ್ಟು ಹೆಚ್ಚಳವಾಗಿದೆ ಎಂದು ಸಿಬಿಡಿಟಿ(ಕೇಂದ್ರ ನೇರ ತೆರಿಗೆ ಮಂಡಳಿ) ಸೋಮವಾರ ತಿಳಿಸಿದೆ.

ಆದಾಯ ತೆರಿಗೆ ಮತ್ತು ನೇರ ತೆರಿಗೆಯಲ್ಲಿನ ಕಳೆದ ನಾಲ್ಕು ವರ್ಷಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ವೈಯಕ್ತಿಕವಾಗಿ ವರ್ಷಕ್ಕೆ ಒಂದು ಕೋಟಿ ರೂಪಾಯಿಗಿಂತ ಅಧಿಕ ಆದಾಯವಿರುವ ತೆರಿಗೆದಾರರು ಶೇ.68ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಕೋಟ್ಯಧಿಪತಿ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, 2014-15ರಲ್ಲಿ ಒಂದು ಕೋಟಿ ಆದಾಯ ಇರುವ ತೆರಿಗೆದಾರರ ಸಂಖ್ಯೆ 88,649 ಇದ್ದಿದ್ದು, 2017-18ರ ಸಾಲಿನಲ್ಲಿ ತೆರಿಗೆದಾರರ ಸಂಖ್ಯೆ 1,40,139ಕ್ಕೆ ಏರಿದ್ದು, ಶೇ.60ರಷ್ಟು ಹೆಚ್ಚಳ ಕಂಡಂತಾಗಿದೆ ಎಂದು ಸಿಬಿಡಿಟಿ ವಿವರಿಸಿದೆ.

ಒಂದು ಕೋಟಿಗಿಂತ ಅಧಿಕ ಆದಾಯವಿರುವ ವೈಯಕ್ತಿಕ ತೆರಿಗೆದಾರರ ಸಂಖ್ಯೆಯೂ ಹೆಚ್ಚಳವಾಗಿದ್ದು, 48,416ರಿಂದ 81,344ಕ್ಕೆ ಏರಿದೆ. ಇದು ಶೇ.68ರಷ್ಟು ಹೆಚ್ಚಳವಾದಂತಾಗಿದೆ ಎಂದು ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ