ಅಸ್ಥಾನಾ ಬಳಿಕ ಈಗ ಸಿಬಿಐ ಡಿಎಸ್‌ಪಿ ದೇವೀಂದರ್‌ ಕುಮಾರ್‌ ಅರೆಸ್ಟ್‌

Team Udayavani, Oct 22, 2018, 7:10 PM IST

ಹೊಸದಿಲ್ಲಿ : ಮಾಂಸ ರಫ್ತು ಉದ್ಯಮಿ ಮೊಯಿನ್‌ ಕುರೇಶಿ ಯನ್ನು ಒಳಗೊಂಡಿರುವ ಭ್ರಷ್ಟಾಚಾರದ ಕೇಸಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಸಿಬಿಐ ಇಂದು ಸೋಮವಾರ ತನ್ನದೇ ಇಲಾಖೆಯ ಡಿಎಸ್‌ಪಿ ದೇವೀಂದರ್‌ ಕುಮಾರ್‌ ಅವರನ್ನು ಬಂಧಿಸುವ ಇನ್ನೊಂದು ಅಭೂತಪೂರ್ವ ಕ್ರಮ ತೆಗೆದುಕೊಂಡಿತು.

ಮೊಯಿನ್‌ ಕುರೇಶಿ ಕೇಸಿನ ಸಾಕ್ಷಿದಾರ ಸತೀಶ್‌ ಸನಾ ಅವರ ಹೇಳಿಕೆಯನ್ನು ಸೃಷ್ಟಿಸಿದ ಆರೋಪ ದೇವೀಂದರ್‌ ಕುಮಾರ್‌ ಅವರ ಮೇಲಿದೆ. 

ದಾಖಲೆಗಳ ಪ್ರಕಾರ ಸತೀಶ್‌ ಸನಾ ಅವರ ಹೇಳಿಕೆಯನ್ನು 2018ರ ಸೆ.26ರಂದು ದಿಲ್ಲಿಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಆದರೆ ತನಿಖೆಯಿಂದ ಗೊತ್ತಾಗಿರುವ ಪ್ರಕಾರ ಸನಾ ಅವರು ಅಂದು ದಿಲ್ಲಿಯಲ್ಲಿ ಇರಲಿಲ್ಲ; ಬದಲಾಗಿ ಅವರು ಹೈದರಾಬಾದ್‌ನಲ್ಲಿ ಇದ್ದರು. 

ಸನಾ ಅವರು ನಿಜಕ್ಕೂ ತನಿಖೆಯನ್ನು ಸೇರಿಕೊಂಡದ್ದು ದಿಲ್ಲಿಯಲ್ಲಿ ಅಕ್ಟೋಬರ್‌ 1ರಂದು ಎಂಬುದು ತನಿಖೆಯಿಂದ ಗೊತ್ತಾಗಿದೆ. 

ಸಿಬಿಐ ನಿರ್ದೇಶಕ ಆಲೋಕ್‌ ಕುಮಾರ್‌ ವರ್ಮಾ ವಿರುದ್ಧ  ಕೇಂದ್ರದ ಜಾಗೃತ ಆಯೋಗಕ್ಕೆ  ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ಥಾನಾ (ಈಗ  ಬಂಧಿತರಾಗಿದ್ದಾರೆ) ಮಾಡಿದ್ದ ಆರೋಪಗಳನ್ನು ಸಾಬೀತು ಪಡಿಸುವ ಸಲುವಾಗಿ ದೇವೀಂದರ್‌ ಅವರು ಸನಾ ಹೇಳಿಕೆಯನ್ನು ಸೃಷ್ಟಿಸಿದ್ದರು ಎಂದು ಸಿಬಿಐ ಹೇಳಿದೆ. 

ಈ ಹಿನ್ನೆಲೆಯಲ್ಲೀಗ ಸಿಬಿಐ, ಮೊಯಿನ್‌ ಕುರೇಶಿ ಕೇಸಿನ ಉಸ್ತುವಾರಿ ನಡೆಸುತ್ತಿದ್ದ ಆಗಿನ ಎಸ್‌ಐಟಿ, ಸಿಬಿಐ ನ ಇತರ ಅಧಿಕಾರಿಗಳ ಪಾತ್ರದ ಬಗ್ಗೆ ಈಗಿನ್ನು ತನಿಖೆ ನಡೆಯಲಿದೆ ಎಂದು ಸಿಬಿಐ ಹೇಳಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ