ಸಿಕ್ಕಿಂ ಮುಖ್ಯಮಂತ್ರಿಯಾಗಿ ಎಸ್‌ಕೆಎಂ ಅಧ್ಯಕ್ಷ ಪಿ ಎಸ್‌ ಗೋಲೆ ಪ್ರಮಾಣ ವಚನ

Team Udayavani, May 27, 2019, 11:17 AM IST

ಗ್ಯಾಂಗ್‌ಟೋಕ್‌ : ಪಿ ಎಸ್‌ ಗೋಲೆ ಎಂದೇ ಜನಪ್ರಿಯರಾಗಿರುವ 51ರ ಹರೆಯದ, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಅಧ್ಯಕ್ಷ ಪ್ರೇಮ್‌ ಸಿಂಗ್‌ ತಮಾಂಗ್‌ ಅವರು ಇಂದು ಸೋಮವಾರ ಬೆಳಗ್ಗೆ ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಲ್ಲಿನ ಪಾಲ್‌ಜೊರ್‌ ಸ್ಟೇಡಿಯಂ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಗಂಗಾ ಪ್ರಸಾದ್‌ ಅವರು ನೂತನ ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸಿದರು.

ಗೋಯಲ್‌ ಅವರು ಪ್ರಕೃತ ರಾಜ್ಯ ವಿಧಾನಸಭೆಯ ಸದಸ್ಯರಲ್ಲ; ಅವರು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.

ಗೋಲೇ ಅವರು ನೇಪಾಲೀ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗ ಸಮಾರಂಭದಲ್ಲಿ ನೆರೆದಿದ್ದ ಅವರ ಸಹಸ್ರಾರು ಬೆಂಬಲಿಗರು ಮುಗಿಲು ಮುಟ್ಟುವ ಹರ್ಷೋದ್ಗಾರಗೈದರು.

ಮಾಜಿ ಮುಖ್ಯಮಂತ್ರಿ ಪವನ್‌ ಕುಮಾರ್‌ ಶಾಮ್ಲಿಂಗ್‌ ಮತ್ತು ಹಿರಿಯ ಸಿಕ್ಕಿಂ ಡೆಮೋಕ್ರಾಟಿಕ್‌ ಫ್ರಂಟ್‌ (ಎಸ್‌ಡಿಎಫ್) ಇದರ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

2013ರಲ್ಲಿ ಸ್ಥಾಪನೆಗೊಂಡ ಎಸ್‌ಕೆಎಂ ಪಕ್ಷ 32 ಸದಸ್ಯ ಬಲದ ಸಿಕ್ಕಿಂ ವಿಧಾನಸಭೆಯಲ್ಲಿ 17 ಸೀಟುಗಳನ್ನು ಜಯಿಸಿ ಅಧಿಕಾರಕ್ಕೆ ಬಂದಿದೆ. ನಿಕಟ ಪ್ರತಿಸ್ಪರ್ಧಿ ಎಸ್‌ಡಿಎಫ್ 15 ಸೀಟುಗಳನ್ನು ಜಯಿಸಿದೆ.

ಶಾಮ್ಲಿಂಗ್‌ ಸರಕಾರವನ್ನು ಎಸ್‌ಕೆಎಂ 24 ವರ್ಷಗಳ ಬಳಿಕ ಪದಚ್ಯುತಗೊಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ