ಸರ್ಕಾರಿ ಸಭೆಗಳಲ್ಲಿ ಮಾಂಸದೂಟ ಬ್ಯಾನ್ ಮಾಡಿ; ಪ್ರಧಾನಿಗೆ ಪೆಟಾ ಮನವಿ
Team Udayavani, Apr 25, 2017, 6:50 PM IST
ನವದೆಹಲಿ:ಜರ್ಮನಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾಂಸಹಾರವನ್ನು ನಿಷೇಧಿಸಿದೆ. ಅದೇ ರೀತಿ ಭಾರತದಲ್ಲಿಯೂ ಸರ್ಕಾರಿ ಸಭೆ ಮತ್ತು ಕಾರ್ಯಕ್ರಮಗಳಲ್ಲಿ ಮಾಂಸಹಾರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಪೆಟಾ(ಪ್ರಾಣಿಗಳ ಅಭಿವೃದ್ಧಿ ಸಂಘಟನೆಯಾದ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್ಸ್) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದೆ.
ಜರ್ಮನಿ ಪರಿಸರ ಸಚಿವ ಇತ್ತೀಚೆಗಷ್ಟೇ ಸಚಿವಾಲಯದ ಸಭೆ ಮತ್ತು ಸಮಾರಂಭಗಳಲ್ಲಿ ಮಾಂಸಹಾರ ಬಳಸದಂತೆ ನಿಷೇಧಿಸಿದ್ದರು. ಮಾಂಸಹಾರ ನಿಷೇಧದಿಂದ ಹವಾಮಾನ ಬದಲಾವಣೆಗೆ ಹೆಚ್ಚಿನ ಕೊಡುಗೆ ನೀಡಿದಂತಾಗುತ್ತದೆ ಎಂದು ಪೆಟಾ ಮನವಿಯಲ್ಲಿ ಉಲ್ಲೇಖಿಸಿದ್ದು, ಮಾಂಸಹಾರ ಬಳಕೆಯಿಂದ ಭಾರತದಲ್ಲಿ ಜನರು ತೀವ್ರ ತರವಾದ ಬರಗಾಲ, ಬಿಸಿ ಗಾಳಿಯಿಂದ ತೊಂದರೆಗೊಳಗಾಗುತ್ತಿದ್ದಾರೆ ಎಂದು ತಿಳಿಸಿದೆ.
ಮಾಂಸ ಮಾರಾಟ ಉದ್ಯಮದಿಂದಾಗಿ ಭೂಮಿಯಿಂದ ಬಾಹ್ಯಾಕಾಶದವರೆಗೂ ಬಿಸಿ ವಾತಾವರಣ ಹೆಚ್ಚತೊಡಗಿದೆ, ಅಲ್ಲದೇ ನೈಸರ್ಗಿಕ ಸಂಪತ್ತು ಕೂಡಾ ಹಾಳಾಗತೊಡಗಿದೆ. ಆದರೆ ನಾವು ಕೂಡಾ ನಮ್ಮ ತಟ್ಟೆಯಲ್ಲಿ ಏನು ಇರಬೇಕೆಂಬುದನ್ನು ನಿರ್ಧರಿಸುವ ಮೂಲಕ ಹವಾಮಾನ ಬದಲಾವಣೆಗಾಗಿ ಹೋರಾಟ ನಡೆಸಬೇಕಾಗಿದೆ ಎಂದು ವಾದಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!