ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ: ಗ್ರಾಹಕರು ಕಂಗಾಲು
Team Udayavani, Feb 10, 2021, 9:01 AM IST
ನವದೆಹಲಿ: ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದ್ದು ಗ್ರಾಹಕರು ಪರಿತಪಿಸುವಂತಾಗಿದೆ. ಬುಧವಾರದ ವೇಳೆಗೆ (ಫೆ. 10) ಪೆಟ್ರೋಲ್ ದರದಲ್ಲಿ 70 ಪೈಸೆ ಹಾಗೂ ಡಿಸೇಲ್ ದರದಲ್ಲಿ 27 ಪೈಸೆ ದಾಖಲೆಯ ಏರಿಕೆ ಕಂಡಿದೆ.
ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 87.60 ರೂ, ಹಾಗೂ ಡೀಸೆಲ್ ಬೆಲೆ 77.73 ರೂ. ತಲುಪಿದೆ. ಇನ್ನೂ ಮುಂಬೈನಲ್ಲಿ ಇಂದಿನ ಏರಿಕೆಯ ನಂತರ ಪೆಟ್ರೋಲ್ ದಾಖಲೆಯ 94.12 ರೂ ಗೆ ಬಂದು ತಲುಪಿದೆ. ಇನ್ನೂ ಡಿಸೇಲ್ ಬೆಲೆ ಇಂದಿನ ಹೆಚ್ಚಳದ ನಂತರ 84.63 ರೂ. ಆಗಿದೆ.
ಇದನ್ನೂ ಓದಿ: ವಿಟ್ಲ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ, ಅಶ್ಲೀಲ ಫೋಟೋ ಬಹಿರಂಗ ಬೆದರಿಕೆ; ಪ್ರಕರಣ ದಾಖಲು
ಬೆಂಗಳೂರಿನಲ್ಲೂ ಪೆಟ್ರೋಲ್ ಬೆಲೆ 70 ಪೈಸೆ ಹೆಚ್ಚಳದ ನಂತರ ಲೀಟರ್ ಗೆ 90.53 ರೂ. ಆಗಿದೆ. ಡಿಸೇಲ್ ನ ಬೆಲೆಯೂ 82. 40 ರೂ. ಗೆ ತಲುಪಿದೆ.
ಸೋಮವಾರ, ಏಪ್ರಿಲ್ ವಿತರಣೆಯ ಬ್ರೆಂಟ್ ಕಚ್ಚಾ ತೈಲ ದರವು ಒಂದು ಬ್ಯಾರೆಲ್ ಗೆ 60 ಡಾಲರ್ ತಲುಪಿತು. ಕಚ್ಚಾ ತೈಲ ಬೆಲೆ ಏರಿಕೆ ಯಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ. ನಿರಂತರವಾಗಿ ತೈಲ ದರ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ಕೂಡ ಪರಿತಪಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅಧಿಕಾರಿಗೆ ಮಸಿ ಬಳಿಯಲು ಘೋಷಿಸಿದ್ದ 1 ಲಕ್ಷ ರೂ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ: ಪ್ರತಿಭಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ