ಮೋದಿಯಿಂದ ಸ್ವರ್ಣ ಹಾರ
Team Udayavani, May 5, 2018, 6:00 AM IST
ಧನ್ಬಾದ್: ತಮಗೆ ಪತ್ರ ಬರೆದ ಪುಟ್ಟ ಮಕ್ಕಳಿಗೂ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡುವುದು ತಿಳಿದೇ ಇದೆ. ಈಗ ಮೋದಿಯವರ ಚಿನ್ನದ ಹಾರ ತನಗೆ ಬೇಕು ಎಂದು ಕೇಳಿದ ವಿದ್ಯಾರ್ಥಿಯೊಬ್ಬನಿಗೆ ಆ ಹಾರವನ್ನು ಕಳುಹಿಸಿಕೊಟ್ಟಿದ್ದಾರೆ ಮೋದಿ. ಜೊತೆಗೆ ಶುಭಹಾರೈಸಿ ಪತ್ರವನ್ನೂ ಬರೆದಿದ್ದಾರೆ.
ಐಐಟಿ ಧನ್ಬಾದ್ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ರಬೇಶ್ ಕುಮಾರ್ ಸಿಂಗ್ ಟ್ವಿಟರ್ನಲ್ಲಿ ಮೋದಿಯವರಿಗೆ ಹೀಗೆ ಮನವಿ ಮಾಡಿದ್ದರು. ಪಂಚಾಯತ್ ರಾಜ್ ದಿನದಂದು ಮಹಾರಾಷ್ಟ್ರದ ರ್ಯಾಲಿಯಲ್ಲಿ ನೀವು ಧರಿಸಿದ್ದ ಚಿನ್ನದ ಬಣ್ಣದ ಹಾರ ನನಗೆ ತುಂಬಾ ಇಷ್ಟವಾಯಿತು. ಅದೇ ರೀತಿಯದ್ದು ನನಗೊಂದು ಸಿಗಬಹುದೇ ಎಂದು ಕೋರಿದ್ದರು. ಮರುದಿನವೇ ಪ್ರಧಾನಿ ಅದೇ ಹಾರವನ್ನು ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ, ನನ್ನ ಹಾರ ನೀವು ಇಷ್ಟಪಟ್ಟಿದ್ದು ತಿಳಿಯಿತು. ನಾನು ಅದರ ಜೊತೆ ಒಂದು ಪತ್ರವನ್ನೂ ಕಳಿಸಿದ್ದೇನೆ. ನಿಮಗೆ ಒಳಿತಾಗಲಿ ಎಂದು ಬರೆದು ಕಳುಹಿಸಿದ್ದಾರೆ.
ಈ ಉಡುಗೊರೆ ಸ್ವೀಕರಿಸಿದ ಬಳಿಕ ತನ್ನ ಸಂತೋಷವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿ ರುವ ರಬೇಶ್, ನಿಮ್ಮಿಂದ ಉಡುಗೊರೆ ಮತ್ತು ಶುಭಾಶಯ ಪತ್ರ ಪಡೆದು ಬಹಳ ಸಂತೋಷವಾಯಿತು. ಸುಂದರವಾದ ಉಡುಗೊರೆಗಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ. ಹಿಂದೊಮ್ಮೆ ಕೊಯಮತ್ತೂರಿನ ಕಾರ್ಯಕ್ರಮದಲ್ಲಿ ಮೋದಿ ಧರಿಸಿದ್ದ ಶಾಲು ಇಷ್ಟವಾಯಿತು ಎಂದು ಟ್ವೀಟ್ ಮಾಡಿದ್ದ ಯುವತಿಗೆ ಅದನ್ನು ಕಳುಹಿಸಿದ್ದು ಸುದ್ದಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್