ಪ್ರಧಾನಿ ಮೋದಿ ವಿರುದ್ಧ ಸಿಧು ಟೀಕೆ
Team Udayavani, Nov 18, 2018, 6:00 AM IST
ಚಂಡೀಗಢ: “”ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ನಾನು ಹೋಗಿದ್ದನ್ನು ಪ್ರಧಾನಿ ಮೋದಿ ಏಕೆ ಪದೇ ಪದೆ ಕೆದಕುತ್ತಿದ್ದಾರೆ? ಸಮಾ ರಂಭಕ್ಕೆ ಅವರನ್ನು ಕರೆಯದೆ ನನಗೆ ಆಮಂತ್ರಣ ನೀಡಿದ್ದಕ್ಕೆ ಅವರಿಗೆ ಹೊಟ್ಟೆ ಕಿಚ್ಚೇ?” ಎಂದು ಪಂಜಾಬ್ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ಸಿಂಗ್ ಸಿಧು ಪ್ರಶ್ನಿಸಿದ್ದಾರೆ. ಜತೆಗೆ, “”ಗೋಗೋದ್ರಾತ್ತರ ಗಲಭೆಗಳಲ್ಲಿ ಆರೋಪ ಹೊತ್ತವರ ಮುಂದೆ ನನ್ನ ದೇಶಾಭಿಮಾನ ಸಾಬೀತುಪಡಿಸುವ ಅವಶ್ಯಕತೆ ನನಗಿಲ್ಲ” ಎನ್ನುವ ಮೂಲಕ ಮತ್ತೂಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.